ಡಿಆರ್ ಎಸ್ ಗೆ ಅಪೀಲ್ ಮಾಡಿ, ಹಿಂಪಡೆದ ಆಂಡ್ರ್ಯೂ ಟೈ, ಕೋಹ್ಲಿ ಆಕ್ಷೇಪ!

ಇಂಡಿಯನ್ ಪ್ರೀಮಿಯರ್ ಲೀಗ್( ಐಪಿಎಲ್) 11 ನೇ ಆವೃತ್ತಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಪರ್ ಆಟಗಾರ ಆಂಡ್ರ್ಯೂ ಟೈ ಡಿಆರ್
ಆಂಡ್ರ್ಯೂ ಟೈ
ಆಂಡ್ರ್ಯೂ ಟೈ
ಇಂದೋರ್: ಇಂಡಿಯನ್ ಪ್ರೀಮಿಯರ್ ಲೀಗ್( ಐಪಿಎಲ್) 11 ನೇ ಆವೃತ್ತಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಪರ್ ಆಟಗಾರ ಆಂಡ್ರ್ಯೂ ಟೈ ಡಿಆರ್ ಎಸ್ ಪಡೆದು ಅದೇ ಕ್ಷಣದಲ್ಲಿ ಡಿಆರ್ ಎಸ್ ನಿರ್ಧಾರವನ್ನು ಹಿಂಪಡೆದಿರುವುದಕ್ಕೆ ವಿರಾಟ್ ಕೋಹ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 
ಮಧ್ಯಪ್ರದೇಶದ ಇಂದೋರ್ ನಲ್ಲಿರುವ ಹೋಳ್ಕರ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದು, ನಿಗದಿತ 20 ಓವರ್ ಗಳಿದೂ ಮುನ್ನವೇ 88 ರನ್ ಗಳಿಗೆ  ಸರ್ವಪತನ ಕಂಡಿದೆ.  ವಿಕೆಟ್ ಪತನದ ಸರಣಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಪಂಜಾಬ್ ತಂಡದ ಪರ ಆಡುತ್ತಿದ್ದ ಆಂಡ್ರ್ಯೂ ಟೈ ಉಮೆಶ್ ಜಾಧವ್ ಬೌಲಿಂಗ್ ನಲ್ಲಿ ಕೀಪರ್ ಪಾರ್ಥಿವ್ ಪಟೇಲ್ ಗೆ ಕ್ಯಾಚಿತ್ತರು. ಈ ಹಂತದಲ್ಲಿ ಚೆಂಡು ಬ್ಯಾಟ್ ಸಂಪರ್ಕಕ್ಕೆ ಬಂದಿರುವ  ಬಗ್ಗೆ ಕೆಲ ಕ್ಷಣ ಅನುಮಾನಗೊಂಡಿದ್ದ ಆಂಡ್ರ್ಯೂ ಟೈ ಡಿಆರ್ ಎಸ್ ಮೊರೆ ಹೋದರು. ಆದರೆ ತಕ್ಷಣವೇ ತಮ್ಮ ನಿರ್ಧಾರವನ್ನು ಹಿಂಪಡೆದರು. ಆಂಡ್ರ್ಯೂ ಟೈ ಔಟಾಗಿದ್ದ ಹಿನ್ನೆಲೆಯಲ್ಲಿ ಒಂದು ವೇಳೆ ಡಿಆರ್ ಎಸ್ ನಿರ್ಧಾರ ಹಿಂಪಡೆಯದೇ ಇದ್ದಿದ್ದರೆ ಕಿಂಗ್ಸ್ ಇಲವೆನ್ ಪಂಜಾಬ್ ಗೆ ಮುಂದಿನ ಹಂತದಲ್ಲಿ ಡಿಆರ್ ಎಸ್ ಪಡೆಯುವ ಅವಕಾಶ ಕಡಿಮೆಯಾಗಿ, ಆರ್ ಸಿಬಿಗೆ ಪ್ಲಸ್ ಪಾಯಿಂಟ್ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಡಿಆರ್ ಎಸ್ ಹಿಂಪಡೆದ ಬಗ್ಗೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com