ಮೋಯಿನ್ ಅಲಿ ವಿರಾಟ್ ಕೊಹ್ಲಿಯನ್ನು 'ಪ್ರಾಪರ್ ಬಿಗ್ ಡಾಗ್' ಎಂದು ಕರೆದಿದ್ದೇಕೆ!

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮುಂದಿನ ತಿಂಗಳು ಇಂಗ್ಲೆಂಡ್ ಕೌಂಟಿಯಲ್ಲಿ ಆಡಲಿದ್ದು ಕೊಹ್ಲಿ ಕುರಿತಂತೆ ಇಂಗ್ಲೆಂಡ್ ತಂಡದ ಆಲ್ರೌಂಡರ್ ಮೋಯಿನ್ ಅಲಿ ಪ್ರಾಪರ್ ಬಿಗ್ ಡಾಗ್ ಎಂದು ಕರೆದಿದ್ದಾರೆ...
ಮೋಯಿನ್ ಅಲಿ, ವಿರಾಟ್ ಕೊಹ್ಲಿ
ಮೋಯಿನ್ ಅಲಿ, ವಿರಾಟ್ ಕೊಹ್ಲಿ
ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮುಂದಿನ ತಿಂಗಳು ಇಂಗ್ಲೆಂಡ್ ಕೌಂಟಿಯಲ್ಲಿ ಆಡಲಿದ್ದು ಕೊಹ್ಲಿ ಕುರಿತಂತೆ ಇಂಗ್ಲೆಂಡ್ ತಂಡದ ಆಲ್ರೌಂಡರ್ ಮೋಯಿನ್ ಅಲಿ ಪ್ರಾಪರ್ ಬಿಗ್ ಡಾಗ್ ಎಂದು ಕರೆದಿದ್ದಾರೆ. 
ಕೌಂಟಿ ತಂಡದಲ್ಲಿ ಸ್ಥಳೀಯ ಖ್ಯಾತ ಆಟಗಾರರು ಇಲ್ಲದಿದ್ದರು. ದಕ್ಷಿಣ ಆಫ್ರಿಕಾದ ಮೊರ್ನೆ ಮಾರ್ಕೆಲ್, ಟಾಮ್ ಕ್ಯುರಾನ್, ಡೀನ್ ಎಲ್ಗರ್ ಮತ್ತು ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ಮತ್ತು ಆರನ್ ಫಿಂಚ್ ಅವರ ನೇತೃತ್ವದಲ್ಲಿ ಅಂತಾರಾಷ್ಟ್ರೀಯದ ಕೆಲ ಖ್ಯಾತ ಆಟಗಾರರು ಆಡುತ್ತಿದ್ದಾರೆ ಎಂದು ಮೋಯಿನ್ ಅಲಿ ಹೇಳಿದ್ದಾರೆ. 
ಇನ್ನು ಕ್ರಿಸ್ ವೋಕ್ಸ್ ಬದಲಿಗೆ ಐಪಿಎಲ್ ನ ಫ್ರಾಂಚೈಸಿ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುತ್ತಿರುವ ಮೋಯಿನ್ ಅಲಿ ಸಹ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನಲ್ಲಿ ಆಡುತ್ತಿದ್ದಾರೆ. ಇನ್ನು ಪ್ರಾಪರ್ ಬಿಗ್ ಡಾಗ್ ಎಂದರೇ ಬಲಿಷ್ಠ ಆಟಗಾರನ ಭಾಗವಹಿಸುವಿಕೆ ಎಂಬ ಅರ್ಥ ಬರುತ್ತದೆ. ಇದೇ ಅರ್ಥದಲ್ಲಿ ಇಂಗ್ಲೆಂಡ್ ಕೌಂಟಿಗೆ ಬಲಿಷ್ಠ ಆಟಗಾರನ ಎಂಟ್ರಿಯಾಗುತ್ತಿದೆ ಎಂದು ಹೇಳಿದ್ದಾರೆ. 
ಮೈದಾನನದಲ್ಲಿ ವಿರಾಟ್ ಕೊಹ್ಲಿ ಹೆಚ್ಚು ಆವೇಷಭರಿತರಾಗಿ ವರ್ತಿಸುತ್ತಾರೆ. ಇದರಿಂದ ಜನ ಕೊಹ್ಲಿಗೆ ಬಹಳ ಸೊಕ್ಕಿದೆ ಎಂದು ಭಾವಿಸುತ್ತಾರೆ. ಆದರೆ ಇದಕ್ಕೆ ಕೊಹ್ಲಿ ತದ್ವಿರುದ್ಧವಾಗಿದ್ದಾರೆ ಎಂದು ಮೋಯಿನ್ ಅಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com