ವಿಚಿತ್ರ ಘಟನೆ: ಗಲ್ಲಿ ಕ್ರಿಕೆಟ್‌ಗೂ ತೀರ್ಪು ನೀಡಿದ ಐಸಿಸಿ!

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಕೆಲವೊಮ್ಮೆ ವಿಶೇಷ ಸಂಗತಿಗಳಿಂದ ಸುದ್ದಿಯಾಗುತ್ತದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಕೆಲವೊಮ್ಮೆ ವಿಶೇಷ ಸಂಗತಿಗಳಿಂದ ಸುದ್ದಿಯಾಗುತ್ತದೆ. 
ಗಲ್ಲಿ ಕ್ರಿಕೆಟ್ ನಲ್ಲಿ ನಡೆದ ಘಟನೆಯೊಂದಕ್ಕೆ ಐಸಿಸಿ ಮೂರನೇ ಅಂಪೈರ್ ಆಗಿ ತೀರ್ಪು ನೀಡಿದೆ. ಗಲ್ಲಿ ಕ್ರಿಕೆಟ್ ನಲ್ಲಿ ಬ್ಯಾಟ್ಸ್ ಮನ್ ಓರ್ವ ಚೆಂಡನ್ನು ಬಲವಾಗಿ ಹೊಡೆಯುತ್ತಾನೆ. ಆದರೆ ಸುರುಳಿ ಸುತ್ತಿಕೊಂಡ ಬಂದ ಚೆಂಡು ಬ್ಯಾಟ್ಸ್ ಮನ್ ಕಾಲಿನಡಿ ಹೋಗಿ ವಿಕೆಟ್ ಗೆ ಬೀಳುತ್ತದೆ. ಇದನ್ನು ವಿಡಿಯೋ ಮಾಡಿದ ಮತ್ತೊರ್ವ ಆಟಗಾರ ಈ ವಿಡಿಯೋವನ್ನು ಐಸಿಸಿಗೆ ಕಳುಹಿಸಿ ಇದು ಔಟಾ? ಅಥವಾ ನಾಟೌಟಾ? ಎಂದು ಕೇಳಿದ್ದಾನೆ. 
ಇದಕ್ಕೆ ಐಸಿಸಿ ರೀಟ್ವೀಟ್ ಮಾಡಿ, ಐಸಿಸಿ ನಿಯಾಮಾವಳಿ 32.1ರ ಪ್ರಕಾರ ಬ್ಯಾಟ್ಸ್ ಮನ್ ಬಾರಿಸಿದ ಚೆಂಡು ವಿಕೆಟ್ ಗೆ ತಾಗಿದರೆ ಅದು ಔಟ್ ಎಂದು ಸ್ಪಷ್ಟಪಡಿಸಿದೆ. 
ಹಮ್ಜಾ ಎಂಬಾತ ಈ ವಿಡಿಯೋವನ್ನು ಐಸಿಸಿಗೆ ಟ್ವೀಟ್ ಮಾಡಿದ್ದ ಎಂದು ತಿಳಿದುಬಂದಿದೆ. ಈ ಗಲ್ಲಿ ಕ್ರಿಕೆಟ್ ಎಲ್ಲಿ ನಡೆದಿದೆ ಎಂಬ ಮಾಹಿತಿ ಇಲ್ಲ. ಕೆಲ ಹುಡುಗರು ಸೇರಿ ಪಂದ್ಯವನ್ನು ಆಡುವಾಗ ಈ ಘಟನೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com