ಯುವ ಆಟಗಾರ ರಿಷಬ್ ಪಂತ್ ಗೆ ಅವಕಾಶ ನೀಡಲು ಧೋನಿ ಟಿ-20 ಯಿಂದ ಹಿಂದೆ ಸರಿದರು: ವಿರಾಟ್ ಕೊಹ್ಲಿ

ಮಹೇಂದ್ರ ಸಿಂಗ್ ಧೋನಿ ಯುವ ಆಟಗಾರ ರಿಷಬ್ ಪಂತ್ ಗೆ ದಾರಿ ಮಾಡಿಕೊಡಲು ಮುಂಬರುವ ಟಿ-20 ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಧೋನಿ , ವಿರಾಟ್ ಕೊಹ್ಲಿ
ಧೋನಿ , ವಿರಾಟ್ ಕೊಹ್ಲಿ

ತಿರುವನಂತಪುರ :  ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ಏಕದಿನ ಪಂದ್ಯದ ಭಾಗವಾಗಿದ್ದು, ಯುವ ಆಟಗಾರ ರಿಷಬ್ ಪಂತ್ ಗೆ  ದಾರಿ ಮಾಡಿಕೊಡಲು ಮುಂಬರುವ ಟಿ-20 ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ವೆಸ್ಟ್  ಇಂಡೀಸ್ ವಿರುದ್ಧದ ಐದನೇ ಏಕದಿನ ಪಂದ್ಯ ಗೆದ್ದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಹ್ಲಿ,  ಈಗಲೂ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ಭಾಗವಾಗಿದ್ದಾರೆ. ಆದರೆ. ಟಿ-20 ಮಾದರಿಯ ಪಂದ್ಯಗಳಿಂದ  ಹೊರಗುಳಿಯುವ ನಿರ್ಧಾರದಿಂದ ರಿಷಬ್ ಪಂತ್ ಅಂತಹ ಆಟಗಾರರಿಗೆ ಹೆಚ್ಚಿನ ಅವಕಾಶ ದೊರೆಯಲಿದೆ ಎಂದರು.

ಮುಂಬರುವ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ  ಟಿ-20 ಪಂದ್ಯಗಳಿಂದ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೈಬಿಡಲಾಗಿದೆ. ಮುಂದೆಯೂ ಕೂಡಾ ಈ ಮಾದರಿಯ ಪಂದ್ಯಗಳಲ್ಲಿ ಧೋನಿ ಆಡುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

ನಂಬರ್ 4ರ ಸ್ಥಾನದಲ್ಲಿ  ಅಂಬಾಟಿ ರಾಯುಡು ಉತ್ತಮ ಪ್ರದರ್ಶನ ಹಾಗೂ ಯುವ ಆಟಗಾರ ಖಲೀಲ್ ಅಹ್ಮದ್ ಬೌಲಿಂಗ್ ಗೆ  ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ವೆಸ್ಟ್ ಇಂಡೀಸ್ ವಿರುದ್ಧ 3-1 ಅಂತರದಿಂದ ಸರಣಿ  ಗೆದ್ದಿರುವುದು ಸಕಾರಾತ್ಮಕ  ಮನೋಭಾವ ಮೂಡಿಸಿರುವುದಾಗಿ  ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com