2ನೇ ಟಿ-20: ರೋ'ಹಿಟ್' ಶರ್ಮಾ ಭರ್ಜರಿ ಶತಕ, ವಿಡೀಸ್ ಗೆಲ್ಲಲು 196 ರನ್ ಗುರಿ

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರ ಭರ್ಜರಿ...
ರೋಹಿತ್ ಶರ್ಮಾ
ರೋಹಿತ್ ಶರ್ಮಾ
ಲಖನೌ: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರ ಭರ್ಜರಿ ಶತಕ(111*)ದ ನೆರವಿನೊಂದಿಗೆ ನಿಗದಿತ 20 ಓವರ್ ಗಳಲ್ಲಿ 195ರನ್ ಗಳ ಬೃಹತ್ ಮೊತ್ತ ಸೇರಿಸಿದೆ.
ಲಖನೌನ ಅಟಲ್ ಬಿಹಾರಿ ಪಾಜಪೇಯಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟಿ-20 ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 196 ರನ್ ರನ್​ ಕಲೆ ಹಾಕುವ ಮೂಲಕ ಪ್ರವಾಸಿ ವೆಸ್ಟ್​ ಇಂಡೀಸ್​ಗೆ 196 ರನ್​ಗಳ ಬೃಹತ್​ ಗುರಿ ನೀಡಿದೆ.
ದೀಪಾವಳಿ ಹಬ್ಬದಂದು ಆಕ್ರಮಣಕಾರಿ ಆಟವಾಡಿದ ರೋಹಿತ್​ ಶರ್ಮಾ ಹಾಗೂ ಶಿಖರ್​ ಧವನ್ ಮೊದಲ ವಿಕೆಟ್​ಗೆ 123 ರನ್​ ಜತೆಯಾಟ ನೀಡಿ ಭದ್ರ ಬುನಾದಿ ಹಾಕಿಕೊಟ್ಟರು. ಈ ವೇಳೆ 43 ರನ್​ ಗಳಿಸಿದ್ದ ಧವನ್​ ವಿಕೆಟ್​ ಒಪ್ಪಿಸಿ ಹೊರ ನಡೆದರು. ನಂತರ ಬಂದ ರಿಷಬ್​ ಪಂತ್​ ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿರದೆ ಕೇವಲ 5 ರನ್​ ಗಳಿಸಿ ಔಟಾದರು.
ರೋಹಿತ್ ಶರ್ಮಾ ಅವರು ಕೇವಲ 61 ಎಸೆತಗಳಲ್ಲಿ 7 ಸಿಕ್ಸರ್​, 8 ಬೌಂಡರಿ ಸಿಡಿಸುವ ಮೂಲಕ ಅಜೇಯ 111 ರನ್​ ಗಳಿಸಿ​​ ಜವಾಬ್ದಾರಿಯುತ ನಾಯಕನ ಆಟ ಪ್ರದರ್ಶಿಸಿದರು. 
ಇನ್ನು 14 ಎಸೆತಗಳಲ್ಲಿ ಅಜೇಯ 26 ರನ್​ ಗಳಿಸಿದ ಕನ್ನಡಿಗ ಕೆಎಲ್ ರಾಹುಲ್ ಕೊನೆಯಲ್ಲಿ ಉತ್ತಮ ಜತೆಯಾಟವಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com