ಮಹಿಳಾ ಟಿ20 ವಿಶ್ವಕಪ್: ಮಿಥಾಲಿ ರಾಜ್ ಭರ್ಜರಿ ಬ್ಯಾಟಿಂಗ್, ಪಾಕ್ ವಿರುದ್ಧ ಭಾರತಕ್ಕೆ ಜಯ

ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಬದ್ಧ ವೈರಿ ಪಾಕಿಸ್ತಾನದ ವಿರುದ್ಧ ಭಾರತ 7 ವಿಕೆಟ್‌ ಗಳ ಭರ್ಜರಿ ಗೆಲುವು ಸಾಧಿಸಿದೆ.
ಮಿಥಾಲಿ ರಾಜ್
ಮಿಥಾಲಿ ರಾಜ್
Updated on
ಪ್ರೊವಿಡೆನ್ಸ್‌: ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಬದ್ಧ ವೈರಿ ಪಾಕಿಸ್ತಾನದ ವಿರುದ್ಧ ಭಾರತ 7 ವಿಕೆಟ್‌ ಗಳ ಭರ್ಜರಿ ಗೆಲುವು ಸಾಧಿಸಿದೆ. 
ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ನಿಗದಿತ 20 ಓವರುಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 133 ರನ್‌ ಗಳಿಸಿತು.
ಗೆಲುವಿಗೆ ಪಾಕಿಸ್ತಾನ ನೀಡಿದ 134 ರನ್ ಗಳ ಗುರಿ ಬೆನ್ನತ್ತಿದ ಭಾರತ, ಮಿಥಾಲಿ ರಾಜ್(56) ಅವರ ಭರ್ಜರಿ ಅರ್ಧ ಶತಕದ ನೆರವಿನಿಂದ 19 ಓವರ್​ಗಳಲ್ಲಿ ಮೂರು ವಿಕೆಟ್​ ನಷ್ಟಕ್ಕೆ 137 ರನ್​ ದಾಖಲಿಸುವ ಮೂಲಕ ಗೆಲುವು ದಾಖಲಿಸಿತು.
ಭಾರತದ ಪರ ಮಿಥಿಲಿ ರಾಜ್​ 56, ಸ್ಮೃತಿ ಮಂದಾನ 26, ಜಮ್ಮಿಮ ರೋಡ್ರಿಗಸ್​ 16 ಹಾಗೂ ಹರ್ಮನ್​ ಪ್ರೀತ್​ ಕೌರ್ 14* ರನ್​ ಗಳಿಸಿದರು.
ಪಾಕಿಸ್ತಾನದ ಪರ ಬಿಸ್ಮಾ ಮರೂಫ್​53, ನಿದಾ ದಾರ್​52 ಹಾಗೂ ಜವೇರಿಯಾ ಖಾನ್​ 17 ರನ್​ ಗಳಿಸಿದ್ದರು.
ಭಾರತದ ಪರವಾಗಿ ಪೂನಮ್‌ ಯಾದವ್, ದಯಾಲನ್‌ ಹೇಮಲತಾ ತಲಾ 2 ವಿಕೆಟ್‌ ಪಡೆದರು. ಅರುಂಧತಿ ರೆಡ್ಡಿ 1 ವಿಕೆಟ್ ಪಡೆದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com