ಟಿ10 ಲೀಗ್ 2018: ಜೆರ್ಸಿ ನಂಬರ್​ 7 ತಿರಸ್ಕರಿಸಿದ ಜಹೀರ್ ಖಾನ್, ಕಾರಣ ಕೇಳಿದರೆ ಅಚ್ಚರಿ ಪಡ್ತೀರಾ!

ಭಾರತ ಕ್ರಿಕೆಟ್​ ತಂಡ ಮಾಜಿ ವೇಗಿ ಜಹೀರ್ ಖಾನ್ ಮುಂಬರುವ ಟಿ10 ಲೀಗ್ 2018ರ ಟೂರ್ನಿಯಲ್ಲಿ ಆಡುತ್ತಿದ್ದು, ತಮಗೆ ನೀಡಿದ್ದ ಜೆರ್ಸಿ ನಂಬರ್ 7 ತಿರಸ್ಕರಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಭಾರತ ಕ್ರಿಕೆಟ್​ ತಂಡ ಮಾಜಿ ವೇಗಿ ಜಹೀರ್ ಖಾನ್ ಮುಂಬರುವ ಟಿ10 ಲೀಗ್ 2018ರ ಟೂರ್ನಿಯಲ್ಲಿ ಆಡುತ್ತಿದ್ದು, ತಮಗೆ ನೀಡಿದ್ದ ಜೆರ್ಸಿ ನಂಬರ್ 7 ತಿರಸ್ಕರಿಸಿದ್ದಾರೆ.
ಜಹೀರ್ ಖಾನ್ ಅವರ ಈ ಕಾರ್ಯಕ್ಕೆ ಒಂದು ಪ್ರಮುಖ ಕಾರಣವಿದ್ದು, ಆ ಕಾರಣವೇ ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಎಂಎಸ್ ಧೋನಿ.. ಹೌದು ಧೋನಿಗಾಗಿ ಜಹೀರ್ ಖಾನ್ ನಂಬರ್ 7 ಜೆರ್ಸಿ ಬೇಡ ಎಂದು ತಿರಸ್ಕರಿಸಿದ್ದಾರಂತೆ. 
ಹೌದು, ಎರಡನೇ ಆವೃತ್ತಿಯ ಟಿ10 ಆವೃತ್ತಿಯಲ್ಲಿ ಬೆಂಗಾಲಿ ಟೈಗರ್ಸ್​ ಪರ ಜಹೀರ್​ ಖಾನ್ ಆಡುತ್ತಿದ್ದು, ಅವರು ತಂಡದ ಜರ್ಸಿ ಬಿಡುಗಡೆ ಸಂದರ್ಭದಲ್ಲಿ 34 ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಆ ಸಂಖ್ಯೆಯ ಆಯ್ಕೆ ಬಗ್ಗೆ ಕೂತೂಹಲಕಾರಿಯಾದ ವಿಷಯವನ್ನೂ ಅವರು ತಿಳಿಸಿದ್ದಾರೆ. ಜಹೀರ್​ ಹುಟ್ಟಿದ್ದ ದಿನಾಂಕ ಅಕ್ಟೋಬರ್​ 7, ಈ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಲು ಅವರಿಗೆ ಅವಕಾಶವಿತ್ತು. ಆದರೆ ಜಹೀರ್​ 7 ಸಂಖ್ಯೆ ಎಂದಿಗೂ ಧೋನಿಗೆ ಸೇರಬೇಕು. ಈಗಾಗಲೇ 15 ವರ್ಷಗಳಿಂದ ಧೋನಿ ಆ ನಂಬರ್​ ಉಪಯೋಗಿಸುತ್ತಿರುವಾಗ ನಾನು ಅದೇ ಸಂಖ್ಯೆಯ ಜರ್ಸಿ ತೊಡಲು ಬಯಸುವುದಿಲ್ಲ. ಆದ್ದರಿಂದ 34 ನಂಬರ್​ ಆಯ್ಕೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ.
ಇಲ್ಲಿ ಜಹೀರ್​ 34 ಏಕೆ ಆಯ್ಕೆ ಮಾಡಿಕೊಂಡಿದ್ದಾರೆ ಎಂಬು ಕುತೂಹಲಕಾರಿ ಅಂಶವನ್ನು ಅವರೇ ತಿಳಿಸಿದ್ದಾರೆ. ನನ್ನ ಜನ್ಮದಿನಾಂಕ 7, ಇಲ್ಲಿ 3 ಮತ್ತು 4 ಕೂಡಿಸಿದರೆ 7 ಬರುವುದರಿಂದ 34 ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಸಮಾರಂಭದಲ್ಲಿ ಅವರು ತಿಳಿಸಿದ್ದಾರೆ. ಆ ಮೂಲಕ ಜಹೀರ್ ​ಖಾನ್​ ತಾವೊಬ್ಬ ಜಂಟಲ್​ಮ್ಯಾನ್​ ಕ್ರಿಕೆಟಿಗ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಇನ್ನು ಇದೇ ನವೆಂಬರ್ 23ರಿಂದ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಟಿ10 ಲೀಗ್ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com