ಶಾಹೀದ್ ಆಫ್ರಿದಿ-ಎಂಎಸ್ ಧೋನಿ
ಕ್ರಿಕೆಟ್
ಎಂಎಸ್ ಧೋನಿ ನಿವೃತ್ತಿ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ: ಶಾಹೀದ್ ಆಫ್ರಿದಿ
ಬ್ಯಾಟಿಂಗ್ ನಲ್ಲಿ ಛಾರ್ಮ್ ಕಳೆದುಕೊಂಡು ಟೀಕೆಗೆ ಗುರಿಯಾಗುತ್ತಿರುವ ಮಾಜಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರ ನಿವೃತ್ತಿ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ ಎಂದು ಪಾಕ್...
ನವದೆಹಲಿ: ಬ್ಯಾಟಿಂಗ್ ನಲ್ಲಿ ಫಾರ್ಮ್ ಕಳೆದುಕೊಂಡು ಟೀಕೆಗೆ ಗುರಿಯಾಗುತ್ತಿರುವ ಮಾಜಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರ ನಿವೃತ್ತಿ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ ಎಂದು ಪಾಕ್ ಕ್ರಿಕೆಟಿಗ ಶಾಹೀದ್ ಆಫ್ರಿದಿ ಹೇಳಿದ್ದಾರೆ.
ಕೆಲ ವರ್ಷಗಳಿಂದ ಕೆಟ್ಟ ಫಾರ್ಮ್ ನಲ್ಲಿ ಧೋನಿ ನಿವೃತ್ತಿ ಘೋಷಿಸಬೇಕೆಂಬ ಒತ್ತಡ ಕೆಲವು ವಲಯಗಳಿಂದ ಕೇಳಿಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಫ್ರಿದಿ ಎಂಎಸ್ ಧೋನಿ ಯಾವಾಗ ನಿವೃತ್ತರಾಗಬೇಕೆಂದು ಹೇಳುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.
ಎಂಎಸ್ ಧೋನಿ ಟೀಂ ಇಂಡಿಯಾ ಕ್ರಿಕೆಟ್ ಗಾಗಿ ಮಹತ್ತರ ಸೇವೆ ಸಲ್ಲಿಸಿದ್ದು ಅವರು ಯಾವಾಗ ನಿವೃತ್ತ ವಿಚಾರಕ್ಕೆ ಸಂಬಂಧಿಸಿದಂತೆ ಯಾರ ಮಾರ್ಗದರ್ಶನವು ಅಗತ್ಯವಿಲ್ಲ. ಈ ಸಂಬಂಧ ಸರಿಯಾದ ನಿರ್ಧಾರವನ್ನೇ ಧೋನಿ ಕೈಗೊಳ್ಳಲಿದ್ದಾರೆ ಎಂಬುದನ್ನು ಆಫ್ರಿದಿ ಉಲ್ಲೇಖಿಸಿದರು.
ಭಾರತೀಯ ಕ್ರಿಕೆಟ್ ಗೆ ಎಂಎಸ್ ಧೋನಿ ನೀಡಿರುವ ಕೊಡುಗೆಯನ್ನು ನೀಡಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ಯಾವಾಗ ನಿವೃತ್ತಿ ಸಲ್ಲಿಸಬೇಕೆಂದು ಹೇಳಲು ಯಾರಿಗೂ ಹಕ್ಕಿಲ್ಲ ಎಂದು ವಿವರಿಸಿದರು. ಇನ್ನು 2019ರ ವಿಶ್ವಕಪ್ ನಲ್ಲಿ ಧೋನಿ ಸಾನಿಧ್ಯ ಅನಿವಾರ್ಯ. ಇದರಿಂದ ಭಾರತದ ವಿಶ್ವಕಪ್ ಗೆಲ್ಲುವ ಸಾಧ್ಯತೆ ಹೆಚ್ಚಲಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ