ನಾರ್ತ್ ಸೌಂಡ್ ಅಂಟಿಗಾ:ಇಂಗ್ಲೆಂಡ್ ವಿರುದ್ಧ ಎಂಟು ವಿಕೆಟ್ ಗಳ ಭರ್ಜರಿ ಜಯದೊಡನೆ ಆಸ್ಟ್ರೇಲಿಯಾ ಮಹಿಳೆಯರು ನಾಲ್ಕನೇ ವಿಶ್ವ ಮಹಿಳಾ ಟಿ20 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ
ಸರ್ ವಿವಿಯನ್ ರಿಚರ್ಡ್ಸ್ ಲ್ರೀಡಾಂಗಣದಲ್ಲಿ ನಡೆದ ಅಂತಿಮ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಲ್ ರೌಂಡರ್ ಆಶ್ಲಿ ಗಾರ್ಡನರ್ ಬ್ಯಾಟಿಂಗ್ ಹಾಗೂ ವ್ಬೌಲಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದಿದ್ದ ಇಂಗ್ಲೆಂಡ್ 19.4 ಓವರ್ ಗಳಲ್ಲಿ 105 ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಇಂಗ್ಲೆಂಡ್ ಪರ ಪ್ರಾರಂಭಿಕ ಆಟಗಾರ್ತಿಯಾಗಿದ್ದ ಡೇನಿಯಲ್ ವ್ಯಾಟ್ (43) ಅವರದೇ ಟಾಪ್ ಸ್ಕೋರ್ ಆಗಿತ್ತು.
ಇನ್ನು ಆಂಗ್ಲರ ಗುರಿಯನ್ನು ಬೆನ್ನತ್ತಿದ ಕಾಂಗರೂ ಮಹಿಳಾ ಪಡೆ 15.1 ಓವರ್ ಗಳಲ್ಲಿಗುರಿ ಮುಟ್ಟಿತು. ಈ ಮೂಲಕ ಆಸ್ಟ್ರೇಲಿಯಾ ನಾಲ್ಕನೇ ಬಾರಿಗೆ ಪ್ರತಿಷ್ಠಿತ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡು ಸಂಭ್ರಮಿಸಿದೆ.
ಈ ಹಿಂದೆ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೇಂಡ್ ಮಾತ್ರವೇ ತಲಾ ಒಂದು ಬಾರಿ ಚಾಂಪಿಯನ್ ಆಗಿದ್ದು ಬಿಟ್ಟರೆ ಇನ್ನಾವ ತಂಡವೂ ಪ್ರಶಸ್ತಿ ಗಳಿಸಿಕೊಂಡಿಲ್ಲ.
ಪ್ರಸ್ತುತ ಸರಣಿಯಲ್ಲಿ ಭಾರತ ಸೆಮಿಫೈನಲ್ ಸುತ್ತಿನಲ್ಲಿ ಇಂಗ್ಲೆಂಡ್ ಮಹಿಳೆಯರಿಗೆ ಸೋತು ಟೂರ್ನಿಯಿಂದ ಹಿಂದೆ ಸರಿದಿತ್ತು.