ಮತ್ತೆ ಡಕೌಟ್, ಡಿಆರ್‌ಎಸ್‌ನಲ್ಲಿ ಮತ್ತೆ ಕೆಎಲ್ ರಾಹುಲ್ ಫೇಲ್, ನೆಟಿಗರಿಂದ ಟ್ರೋಲ್!

ಪದೇ ಪದೇ ಅಂಪೈರ್ ನಿರ್ಧಾರ ಪರಾಮರ್ಶೆ ವ್ಯವಸ್ಥೆ(ಡಿಆರ್‌ಎಸ್‌) ತೆಗೆದುಕೊಂಡು ವೈಫಲ್ಯ ಅನುಭವಿಸುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ವಿರುದ್ಧ ನೆಟಿಗರು ತಿರುಗಿ ಬಿದ್ದಿದ್ದಾರೆ...
ಕೆಎಲ್ ರಾಹುಲ್
ಕೆಎಲ್ ರಾಹುಲ್
ರಾಜಕೋಟ್: ಪದೇ ಪದೇ ಅಂಪೈರ್ ನಿರ್ಧಾರ ಪರಾಮರ್ಶೆ ವ್ಯವಸ್ಥೆ(ಡಿಆರ್‌ಎಸ್‌) ತೆಗೆದುಕೊಂಡು ವೈಫಲ್ಯ ಅನುಭವಿಸುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ವಿರುದ್ಧ ನೆಟಿಗರು ತಿರುಗಿ ಬಿದ್ದಿದ್ದಾರೆ. 
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಾಸ್ ಗೆದ್ದು ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಮೊದಲ ಓವರ್ ನ ಮೂರನೇ ಎಸೆತದಲ್ಲಿ ಎಲ್ಬಿಡಬ್ಲ್ಯೂಗೆ ಬಲಿಯಾದರು. ಅಂಪೈರ್ ಔಟ್ ತೀರ್ಪು ನೀಡಿದ್ದರು ಕೆಎಲ್ ರಾಹುಲ್ ಡಿಆರ್‌ಎಸ್‌ ತೆಗೆದುಕೊಂಡರು. ಡಿಆರ್‌ಎಸ್‌ನಲ್ಲಿ ಔಟ್ ಎಂದು ತೀರ್ಪು ಬಂದಿತು. 
ಇದರಿಂದ ಕೆರಳಿದ ಟ್ವೀಟರಿಗರು ಕೆಎಲ್ ರಾಹುಲ್ ವಿರುದ್ಧ ಕೆಂಡಕಾರಿದ್ದಾರೆ. ಕೆಎಲ್ ರಾಹುಲ್ ಗೆ ಸುಖಾಸುಮ್ಮನೆ ಡಿಆರ್‌ಎಸ್‌ ತೆಗೆದುಕೊಳ್ಳುವುದನ್ನು ಬಿಟ್ಟರೆ ಮತ್ತೇನು ಬರುತ್ತದೆ ಎಂದು ಕಿಡಿಕಾರಿದ್ದಾರೆ. 
ಇಂಗ್ಲೆಂಡ್ ಪ್ರವಾಸದ ವೇಳೆ ಹಾಗೂ ಏಷ್ಯಾಕಪ್ ನಲ್ಲಿ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಡಿಆರ್‌ಎಸ್‌ ತೆಗೆದುಕೊಂಡು ವಿಫಲರಾಗಿದ್ದರಿಂದ ಕೆಎಲ್ ರಾಹುಲ್ ಟ್ರೋಲ್ ಗೆ ಗುರಿಯಾಗಿದ್ದರು. ಇದೀಗ ಮತ್ತದೇ ತಪ್ಪು ಮಾಡಿರುವುದು ಟ್ವೀಟರಿಗರನ್ನು ಇನ್ನಷ್ಟು ಕೆರಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com