ಹೈದರಾಬಾದ್ ಟೆಸ್ಟ್: ರೋಸ್ಟನ್ ಚೇಸ್ ಅಬ್ಬರದ ಬ್ಯಾಟಿಂಗ್, ವಿಂಡೀಸ್ ದಿನದಂತ್ಯಕ್ಕೆ 295/7

ಭಾರತ-ವೆಸ್ಟ್ ಇಂಡೀಸ್ ನಡುವೆ ಹೈದರಾಬಾದ್ ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಮೊದಲ ದಿನದಾಟದ ಅಂತ್ಯವಾಗಿದ್ದು ಪ್ರವಾಸಿ ವೆಸ್ಟ್ ಇಂಡೀಸ್ 95 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 295 ರನ್ ಕಲೆ ಹಾಕಿದೆ.
ಹೈದರಾಬಾದ್ ಟೆಸ್ಟ್: ರೋಸ್ಟನ್ ಚೇಸ್ ಅಬ್ಬರದ ಬ್ಯಾಟಿಂಗ್, ವಿಂಡೀಸ್ ದಿನದಂತ್ಯಕ್ಕೆ 295/7
ಹೈದರಾಬಾದ್ ಟೆಸ್ಟ್: ರೋಸ್ಟನ್ ಚೇಸ್ ಅಬ್ಬರದ ಬ್ಯಾಟಿಂಗ್, ವಿಂಡೀಸ್ ದಿನದಂತ್ಯಕ್ಕೆ 295/7
ಹೈದರಾಬಾದ್: ಭಾರತ-ವೆಸ್ಟ್ ಇಂಡೀಸ್ ನಡುವೆ ಹೈದರಾಬಾದ್ ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಮೊದಲ ದಿನದಾಟದ ಅಂತ್ಯವಾಗಿದ್ದು ಪ್ರವಾಸಿ ವೆಸ್ಟ್ ಇಂಡೀಸ್ 95 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 295 ರನ್ ಕಲೆ ಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಪ್ರಾರಂಭಿಸಿದ ವಿಂಡೀಸ್ ತಂಡ ರೋಸ್ಟನ್ ಚೇಸ್ (98*) ಮತ್ತು ನಾಯಕ ಜೇಸನ್ ಹೋಲ್ಡರ್ (52)  ರ ಆಕರ್ಷಕ ಬ್ಯಾಟಿಂಗ್ ನೆರವಿನೊಡನೆ ಉತ್ತಮ ಮೊತ್ತವನ್ನು ಕಲೆ ಹಾಕಿದೆ.
ಆದರೆ ಪಂದ್ಯ ಪ್ರಾರಂಭವಾದಾಗ ಆರಂಭಿಕ ಆಟಗಾರರಾಗಿ ಆಗಮಿಸಿದ ಕ್ರೇಗ್ ಬ್ರಾತ್‌ವೇಟ್ (14) ಹಾಗೂ ಕೀರಾನ್ ಪೊವೆಲ್ (22) ಹೆಚ್ಚು ಸಮಯ ಕ್ರೀಸ್ ನಲ್ಲಿ ನಿಲ್ಲದೆ ಪೆವಿಲಿಯನ್ ಹಾದಿ ಹಿಡಿದರು. ಆ ಬಳಿಕ ಜತೆಯಾದ ಶಾಯ್ ಹೋಪ್ (36) ಹಾಗೂ ಶಿಮ್ರನ್ ಹೇಟ್ಮಯರ್ (12) ಸಹ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದರು.
ಇದಾದ ಬಳಿಕ ಬಂದ  ರೋಸ್ಟನ್ ಚೇಸ್ ಹಾಗೂ ವಿಕೆಟ್ ಕೀಪರ್ ಶೇನ್ ಡೌರಿಚ್ ಭಾರತೀಯ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದ್ದರು. ಆರನೇ ವಿಕೆಟ್ ನಷ್ಟದ ವೇಳೆಗೆ 69 ರನ್‌ ಜತೆಯಾಟವಾಡಿ ಪ್ರವಾಸಿ ತಂಡಕ್ಕೆ ಉತ್ತಮ ನಿರೀಕ್ಷೆ ಮೂಡಿಸಿದ್ದರು. ಅಷ್ಟರಲ್ಲಿ 30 ರನ್ ಗಳಿಸಿದ್ದ ಡೌರಿಚ್ ಉಮೇಶ್ ಅವರಿಂದ ಎಲ್‌ಬಿಡಬ್ಲ್ಯು  ಆಗಿ ಕಣದಿಂದ ದೂರಾಗಿದ್ದರು.
ಆ ಬಳಿಕ ರೋಸ್ಟನ್ ಚೇಸ್  ಹಾಗೂ ನಾಯಕ ಜೇಸನ್ ಹೋಲ್ಡರ್  ಭಾರತಕ್ಕೆ ದಿಟ್ಟ ಹೋರಾಟ ನೀಡಿದ್ದರು.ಹೋಲ್ಡರ್ 52 ರನ್ ಗಳಿಸಿ ಏಳನೇ ವಿಕೆಟ್‌ಗೆ 104 ರನ್‌ ಅದ್ಭುತ ಜತೆಯಾಟ ನೀಡಿದ್ದರು.ಇನ್ನೊಂದೆಡೆ ದಿಟ್ಟ ಪ್ರದರ್ಶನ ನೀಡಿರುವ ಚೇಸ್  ದಿನದಮ್ತ್ಯದ ವರೆಗೆ ಔಟಾಗದೆ ಕ್ರೀಸ್ ನಲ್ಲಿದ್ದಾರೆ.
ಇನ್ನು ಭಾರತೀಯ ಬೌಲರ್ ಗಳು ಸಹ ಪ್ರಥಮ ದಿನದಾಟದಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದು ಉಮೇಶ್ ಯಾದವ್ ಹಾಗೂ ಕುಲದೀಪ್ ಯಾದವ್ ತಲಾ 3 ವಿಕೆಟ್ ಪಡೆದು ಮಿಂಚಿದ್ದಾರೆ. ಇನ್ನು ಆರ್. ಅಶ್ವಿನ್ ಒಂದು ವಿಕೆಟ್ ಪಡೆದು ಗಮನ ಸೆಳೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com