ವಿರಾಟ್ ಕೊಹ್ಲಿ, ಅಂಬಟ್ಟಿ ರಾಯುಡು
ವಿರಾಟ್ ಕೊಹ್ಲಿ, ಅಂಬಟ್ಟಿ ರಾಯುಡು

ಭಾರತಕ್ಕೆ ತಲೆ ನೋವಾಗಿದ್ದ 4ನೇ ಕ್ರಮಾಂಕ: ಅಂಬಟ್ಟಿ ರಾಯುಡು ಆಟ ನಮಗೆ ಶ್ರೀರಕ್ಷೆ: ವಿರಾಟ್ ಕೊಹ್ಲಿ

2019ರ ವಿಶ್ವಕಪ್ ಪಂದ್ಯಾವಳಿಗೆ ಭರ್ಜರಿ ತಯಾರಿ ನಡೆಸಿರುವ ಟೀಂ ಇಂಡಿಯಾ 4ನೇ ಕ್ರಮಾಂಕದ ಆಟಗಾರನಿಗಾಗಿ ಹೆಚ್ಚು ತಲೆಕೆಡಿಸಿಕೊಂಡಿತ್ತು...
Published on
ಮುಂಬೈ: 2019ರ ವಿಶ್ವಕಪ್ ಪಂದ್ಯಾವಳಿಗೆ ಭರ್ಜರಿ ತಯಾರಿ ನಡೆಸಿರುವ ಟೀಂ ಇಂಡಿಯಾ 4ನೇ ಕ್ರಮಾಂಕದ ಆಟಗಾರನಿಗಾಗಿ ಹೆಚ್ಚು ತಲೆಕೆಡಿಸಿಕೊಂಡಿತ್ತು. ಇದೀಗ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅಂಬಟ್ಟಿ ರಾಯುಡು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ಸ್ ಬೀಸುತ್ತಿದ್ದು ಉತ್ತಮವಾಗಿ ಆಡುತ್ತಿರುವುದು ನಮಗೆ ನಿಟ್ಟುಸಿರು ಬಿಡುವಂತೆ ಮಾಡಿದೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. 
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಅಂಬಟ್ಟಿ ರಾಯುಡು ಬಾಲ್ ಟು ಬಾಲ್ ರನ್ ಗಳಿಸಿ ಶತಕ ಸಿಡಿಸಿದ್ದರು. ಒತ್ತಡದ ಸ್ಥಿತಿಯಲ್ಲೂ ಧೃತಿಗೆಡದೆ ರಾಯುಡು ಬ್ಯಾಟ್ ಬೀಸಿರುವುದು ನಮಗೆ ಹೆಚ್ಚು ಪ್ರಯೋಜನವಾಗಲಿದೆ. ಇನ್ನು ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ ಮಾನ್ಗಾಗಿ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 
ವಿಂಡೀಸ್ ವಿರುದ್ಧ ಭಾರತ ದೊಡ್ಡ ಮಟ್ಟದ ಗೆಲುವನ್ನು ಸಾಧಿಸಿದೆ. ಏಕದಿನ ಪಂದ್ಯದಲ್ಲಿ 224 ರನ್ ಗಳಿಂದ ಭಾರತ ಜಯಗಳಿಸಿತ್ತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ 150ಕ್ಕೂ ಹೆಚ್ಚು ರನ್ ಹಾಗೂ ಅಂಬಟ್ಟಿ ರಾಯುಡು 100 ರನ್ ಗಳಿಸಿದ್ದು ತಂಡ 377 ರನ್ ಪೇರಿಸಲು ಸಹಕಾರಿಯಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com