ಮೈದಾನದಲ್ಲಿ ಟೀಂ ಇಂಡಿಯಾ ಯುವ ಬೌಲರ್ ಅತಿರೇಕದ ವರ್ತನೆ, ಖಲೀಲ್‌ಗೆ ಐಸಿಸಿ ವಾರ್ನಿಂಗ್!

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ವಿಕೆಟ್ ಪಡೆದ ನಂತರ ಅತಿರೇಕ, ಉದ್ರೇಕಕಾರಿ ವರ್ತನೆ ತೋರಿದ ಟೀಂ ಇಂಡಿಯಾದ ಯುವ ಬೌಲರ್ ಖಲೀಲ್...
ಖಲೀಲ್ ಅಹಮ್ಮದ್
ಖಲೀಲ್ ಅಹಮ್ಮದ್
ದುಬೈ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ವಿಕೆಟ್ ಪಡೆದ ನಂತರ ಅತಿರೇಕ, ಉದ್ರೇಕಕಾರಿ ವರ್ತನೆ ತೋರಿದ ಟೀಂ ಇಂಡಿಯಾದ ಯುವ ಬೌಲರ್ ಖಲೀಲ್ ಅಹಮ್ಮದ್ ಗೆ ಐಸಿಸಿ ಎಚ್ಚರಿಕೆ ನೀಡಿದೆ. 
ವೆಸ್ಟ್ ಇಂಡೀಸ್ ಆಟಗಾರ ಸ್ಯಾಮೂಯೆಲ್ಸ್ ವಿಕೆಟ್ ಪಡೆಯುತ್ತಿದ್ದಂತೆ ಖಲೀಲ್ ಖುಷಿಯಲ್ಲಿ ಅತಿರೇಕ ಹಾಗೂ ಉದ್ರೇಕಕಾರಿ ವರ್ತನೆಯನ್ನು ತೋರಿ ನಿಯಮ ಮೀರಿ ವರ್ತಿಸಿದ್ದು ಇದಕ್ಕೆ ಐಸಿಸಿ ಎಚ್ಚರಿಸಿದೆ. ಇಷ್ಟೇ ಇಲ್ಲ ಡಿಮೆರಿಟ್ ಪಾಯಿಂಟ್ ಕೂಡ ನೀಡಿದೆ. 
ಅಲ್ಲದೆ ಪದ ಬಳಕೆ ಹಾಗೂ ಸಂಭ್ರಮಾಚರಣೆ ಎದುರಾಳಿಯನ್ನು ಕೆಣಕುವಂತಿತ್ತು. ಈ ಮೂಲಕ ಖಲೀಲ್ ಐಸಿಸಿ ಕೋಡ್ ಲೆವೆಲ್ 1 ಉಲ್ಲಂಘಿಸಿದ್ದಾರೆ. 
ನಿಯಮ ಉಲ್ಲಂಘಿಸಿದ ಖಲೀಲ್ ಅಹಮ್ಮದ್ ಗೆ ಪಂದ್ಯದ ಬಳಿಕ ಮ್ಯಾಚ್ ರೆಫ್ರಿ ವಾರ್ನಿಂಗ್ ನೀಡಿದ್ದರು. ಇಷ್ಟೇ ಇಲ್ಲ ಡಿಮೆರಿಟ್ ಪಾಯಿಂಟ್ಸ್ ನೀಡಲಾಯಿತು. 4ನೇ ಏಕದಿನದಲ್ಲಿ ಖಲೀಲ್ ಅಹಮ್ಮದ್ 5 ಓವರ್ ಬೌಲಿಂಗ್ ಮಾಡಿ 13 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com