ಕ್ರಿಕೆಟ್
ವಿರಾಟ್ ಕೊಹ್ಲಿ ಶತಕಕ್ಕೂ ಬ್ರಾಕ್ ಲೆಸ್ನರ್ ಗೂ ಏನು ಸಂಬಂಧ..!, ವಿರಾಟ ರೂಪಕ್ಕೆ ದಂಗಾದ WWE ಸೂಪರ್ ಸ್ಚಾರ್ ಹೇಳಿದ್ದೇನು?
ವಿಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ 3 ಶತಕ ಭಾರಿಸಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಇದೀಗ ಖ್ಯಾತ ರೆಸ್ಲಿಂಗ್ ಪಟು ಬ್ರಾಕ್ ಲೆಸ್ನರ್ ರ ಕಾನೂನು ಸಲಹೆಗಾರ ಟ್ವೀಟ್ ಮಾಡುವ ಮೂಲಕ ಕೊಹ್ಲಿಗೆ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.
ನವದೆಹಲಿ: ವಿಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ 3 ಶತಕ ಭಾರಿಸಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಇದೀಗ ಖ್ಯಾತ ರೆಸ್ಲಿಂಗ್ ಪಟು ಬ್ರಾಕ್ ಲೆಸ್ನರ್ ರ ಕಾನೂನು ಸಲಹೆಗಾರ ಟ್ವೀಟ್ ಮಾಡುವ ಮೂಲಕ ಕೊಹ್ಲಿಗೆ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.
ತಮ್ಮ ಹಾಸ್ಯಾತ್ಮಕ ಟ್ವೀಟ್ ನಲ್ಲಿ ಬ್ರಾಕ್ ಲೆಸ್ನರ್ ರ ಕಾನೂನು ಸಲಹೆಗಾರ ಪಾಲ್ ಹೇಮನ್ ಕೊಹ್ಲಿ ಕೂಡ ತಮ್ಮ ಕಕ್ಷೀದಾರ ಬ್ರಾಕ್ ಲೆನ್ಸರ್ ರಂತೆ (Eat, Sleep, Conquer, Repeat) ತಿಂದು, ಮಲಗಿ, ಗೆಲುವು ಸಾಧಿಸಿ, ಅದನ್ನೇ ಪುನಾರವರ್ತಿಸಿದ್ದಾರೆ ಎಂದು ಚಟಾಕಿ ಹಾರಿಸಿದ್ದಾರೆ.
ಇಷ್ಟಕ್ಕೂ ಯಾರೂ ಈ ಪಾಲ್ ಹೇಮನ್, ಕೊಹ್ಲಿ ಕುರಿತು ಟ್ವೀಟ್ ಮಾಡಿದ್ದೇಕೆ?
ನಿಮಗೆಲ್ಲರಿಗೂ ಖ್ಯಾತ ರೆಸ್ಲಿಂಗ್ ಕಾರ್ಯಕ್ರಮ WWE ಬಗ್ಗೆ ತಿಳಿದಿರಬೇಕು. ಇಲ್ಲಿ ವಿಶ್ವದ ಬಲಿಷ್ಟ ಕ್ರೀಡಾಪಟು ಬ್ರಾಕ್ ಲೆಸ್ನರ್ ಎಂಬಾತನ ಪರಿಚಯ ಕೂಡ ನಿಮಗಿರಬೇಕು. ಈ ಬ್ರಾಕ್ ಲೆಸ್ನರ್ ನ ಕಾನೂನು ಸಲಹೆಗಾರನೇ ಈ ಪಾಲ್ ಹೇಮನ್. ಈ ಹಿಂದೆ ಕೊಹ್ಲಿ ವಿಂಡೀಸ್ ವಿರುದ್ಧ ಶತಕ ಸಿಡಿಸಿದ್ದಾಗ, ಸ್ಚಾರ್ ಸ್ಪೋರ್ಟ್ಸ್ ಇದೇ ಪಾಲ್ ಹೇಮನ್ ನ ಸ್ಲೋಗನ್ ಮೂಲಕ ಕೊಹ್ಲಿಗೆ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಕೆ ಮಾಡಿತ್ತು. Eat, Sleep, Hit100s ಎಂದು ಟ್ವೀಟ್ ಮಾಡಿತ್ತು.
ಇದನ್ನು ಗಮನಿಸಿದ ಪಾಲ್ ಹೇಮನ್.. ಸ್ಟಾರ್ ಸ್ಪೋರ್ಟ್ ಸಂಸ್ಥೆ ನನ್ನ ಅನುಮತಿ ಇಲ್ಲದೇ ನನ್ನ ಸ್ಲೋಗನ್ ಅನ್ನು ಬಳಸಿಕೊಂಡಿದೆ. ಇದು ಸ್ಟಾರ್ ಸ್ಪೋರ್ಟ್ಸ್ ನ ಮೊದಲ ಅಪರಾಧವಾಗಿರುವುದರಿಂದ ಒಮ್ಮೆ ಕ್ಷಮಿಸುತ್ತೇನೆ. ಕೊಹ್ಲಿಗೆ ನನ್ನ ಶುಭಾಶಯ ಎಂದು ಹೇಳಿ ಟ್ವೀಟ್ ಮಾಡಿದ್ದರು. ಇದಕ್ಕೆ ಸ್ಟಾರ್ ಸ್ಪೋರ್ಟ್ಸ್ ಕೂಡ ಪ್ರತಿಕ್ರಿಯೆ ನೀಡಿದ್ದು, ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿಯನ್ನೂ ಕೂಡ ಬ್ರಾಕ್ ಲೆಸ್ನರ್ ರಂತೆ ಬೀಸ್ಟ್ ಇನ್ ಕಾರ್ನೆಟ್ ಎಂದು ಕರೆಯುತ್ತಾರೆ ಎಂದು ಟ್ವೀಟ್ ಮಾಡಿದೆ. ಇದಕ್ಕೆ ತಮ್ಮದೇ ಆದ ಧಾಟಿಯಲ್ಲಿ ಉತ್ತರಿಸಿರುವ ಪಾಲ್ ಹೇಮನ್, ಬ್ರಾಕ್ ಲೆಸ್ನರ್ ವಿಶ್ವದ ನಿರ್ಣಾಯಕ ಶ್ರೇಷ್ಠ ಕ್ರೀಡಾಪಟು. ಏಕೆಂದರೆ ಲೆಸ್ನರ್ ಪಾಲ್ ಹೇಮನ್ ರಂತಹ ಸಲಹೆಗಾರರನ್ನು ಹೊಂದಿದ್ದಾರೆ ಎಂದು ಮತ್ತೆ ಕೊಹ್ಲಿ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.
ಆದರೆ ಇಷ್ಟೆಲ್ಲಾ ಟ್ವೀಟ್ ಗಳ ನಡುವೆ ತಮ್ಮ ಹೆಸರು ಬಂದರೂ ಬ್ರಾಕೆ ಲೆಸ್ನರ್ ಆಗಲಿ ಅಥವಾ ವಿರಾಟ್ ಕೊಹ್ಲಿಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ,
ಒಟ್ಟಾರೆ ಈ ಸರಣಿ ಟ್ವೀಟ್ ಕೊಹ್ಲಿ ಮತ್ತು ಬ್ರಾಕ್ ಲೆಸ್ನರ್ ಅಭಿಮಾನಿಗಳಿಗೆ ಕೆಲ ಕಾಲ ಖುಷಿ ನೀಡಿದ್ದಂತೂ ಸತ್ಯ.