ಎಂಎಸ್ ಧೋನಿ ಅವರನ್ನು ಎರಡು ಟಿ20 ಸರಣಿಯಿಂದ ಬಿಸಿಸಿಐ ಆಯ್ಕೆ ಸಮಿತಿ ಕೈ ಬಿಟ್ಟಿದ್ದು ಆಶ್ಚರ್ಯಕರ ವಿಷಯವೆನಲ್ಲ. ಇದು ಉತ್ತಮ ನಿರ್ಧಾರ. ಅವರು ಫಾರ್ಮ್ ಕಳೆದುಕೊಂಡಿದ್ದಾರೆ. ರನ್ ಗಳಿಸಲು ಪರದಾಡುತ್ತಿದ್ದಾರೆ. ಅಲ್ಲದೆ ಧೋನಿ ಅವರು 2020ರ ವಿಶ್ವಕಪ್ ಟಿ20ಯಲ್ಲಿ ಆಡುವುದು ಅನುಮಾನ. ಹೀಗಾಗಿ ಭಾರತಕ್ಕೆ ಬದಲಿ ಕೀಪರ್ ನ ಅಗತ್ಯವಿದೆ. ಅದಕ್ಕಾಗಿ ಈಗಿನಿಂದಲೇ ಸಿದ್ಧತೆಗಳು ನಡೆಯುತ್ತಿದ್ದು ಧೋನಿಯನ್ನು ಕೈ ಬಿಟ್ಟು ಉತ್ತಮ ಫಾರ್ಮ್ ನಲ್ಲಿರುವ ರಿಷಬ್ ಪಂತ್ ಗೆ ಸ್ಥಾನ ನೀಡಲಾಗಿದೆ ಎಂದರು.