ಸೌತಾಂಪ್ಟನ್: ಟೀಂ ಇಂಡಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೆ ದಿನ ಇಂಗ್ಲೆಂಡ್ 96.1 ಓವರ್‌ಗಳಲ್ಲಿ 271 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿದ್ದು, ಭಾರತದ ಗೆಲುವಿಗೆ 245 ರನ್ ಗಳ ಟಾರ್ಗೆಟ್ ನೀಡಿದೆ.
ನಿನ್ನೆ ಟೀಂ ಇಂಡಿಯಾ ಬೌಲರ್ ಗಳು ಮಿಂಚಿನ ದಾಳಿ ನಡೆಸಿದ ಪರಿಣಾಮ 3ನೇ ದಿನದಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 260 ರನ್ ಗಳಿಸಿದ್ದ ಇಂಗ್ಲೆಂಡ್ ಇಂದು 271ಕ್ಕೆ ಎಲ್ಲಾ ವಿಕೆಟ್ ಕಳೆದುಕೊಂಡಿದೆ.
ಭಾರತದ ಪರ ಮೊಹಮ್ಮದ್ ಶಮಿ ನಾಲ್ಕು, ಇಶಾಂತ್ ಶರ್ಮಾ ಎರಡು ಮತ್ತು ಜಸ್ಪ್ರೀತ್ ಬುಮ್ರಾ ಹಾಗೂ ಆರ್ ಅಶ್ವಿನ್ ತಲಾ ಒಂದು ವಿಕೆಟುಗಳನ್ನು ಪಡೆದರು.
ಗೆಲುವಿಗಾಗಿ ಆಂಗ್ಲರು ನೀಡಿದ 245 ರನ್ ಗಳ ಟಾರ್ಗೆಟ್ ಬೆನ್ನತ್ತಿದ್ದ ಭಾರತ ಆರಂಭಿಕ ಆಘಾತ ಅನುಭವಿಸಿದ್ದು, ನಾಲ್ಕನೇ ದಿನದ ಊಟದ ವಿರಾಮದ ಹೊತ್ತಿಗೆ 20 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿದೆ.