ದುಬೈ: ಪ್ರತಿಷ್ಠಿತ ಏಷ್ಯಾ ಕಪ್ ಕ್ರಿಕೆಟ್ ನ ಹೈ ವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ವಿರೋಧಿ ಪಾಕಿಸ್ತಾನ ವಿರುದ್ಧ ಭಾರತ 8 ವಿಕೆಟ್ ಗಳ ಅಮೋಘ ಜಯ ಸಾಧಿಸಿದೆ.
ಪಾಕ್ ನೀಡಿದ್ದ 163 ರನ್ ಗಳ ಸುಲಭ ಗುರಿಯನ್ನು ಬೆನ್ನತ್ತಿದ ಟೀಂ ಇಂಡುಯಾ ದಿತ್ಟ ಪ್ರದರ್ಶನವನ್ನೇ ನಿಡಿದೆ. ನಾಯಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಪ್ರಾರಂಭಿಕರಾಗಿ ಬಂದು ಭಾರತ ಉತ್ತಮ ರನ್ ಗಳಿಕೆ ಮಾಡಲು ಕಾರಣವಾಗಿದ್ದರು.
ರೋಹಿತ್ ಶರ್ಮಾ 36 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಮೊದಲ ವಿಕೆಟ್ ಪತನಕ್ಕೆ ಮುನ್ನ 13.1 ಓವರ್‌ಗಳಲ್ಲಿ 86 ರನ್ ಜತೆಯಾಟ ನೀಡಿದ್ದಾರೆ.
ರೋಹಿತ್ ಶರ್ಮಾ 52 ರನ್ ಗಳಿಸಿದರೆ ಧವನ್ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 46 ರನ್ ಗಳಿಸಿದರು.
ಇವರ ಬಳಿಕ ಜತೆಯಾದ ಅಂಅಂಬಟಿ ರಾಯುಡು ಹಾಗೂ ದಿನೇಶ್ ಕಾರ್ತಿಕ್ ಇಬ್ಬರೂ ತಲಾ 31 ರನ್ ಗಳಿಸಿ ಬಾರತವನ್ನು ಗೆಲುವಿನ ದಡ ಮುಟ್ಟಿಸಿದ್ದಾರೆ.