ಏಷ್ಯಾಕಪ್ ಫೈನಲ್: ಲಿಟನ್ ಶತಕ, ಬಾಂಗ್ಲಾ 222ಕ್ಕೆ ಆಲೌಟ್
ಕ್ರಿಕೆಟ್
ಏಷ್ಯಾಕಪ್ ಫೈನಲ್: ಲಿಟನ್ ಶತಕ, ಬಾಂಗ್ಲಾ 222ಕ್ಕೆ ಆಲೌಟ್
ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಫೈನಲ್ ಹಣಾಹಣಿಯಲ್ಲಿ ಬಾಂಗ್ಲಾದೇಶ 222 ರನ್ ಗಳಿಗೆ ಆಲೌಟ್ ಆಗಿದೆ
ದುಬೈ: ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಫೈನಲ್ ಹಣಾಹಣಿಯಲ್ಲಿ ಬಾಂಗ್ಲಾದೇಶ 222 ರನ್ ಗಳಿಗೆ ಆಲೌಟ್ ಆಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಬಾಂಗ್ಲಾ ಬಲಗೈ ಬ್ಯಾಟ್ಸ್ ಮನ್, ಪ್ರಾರಂಭಿಕ ಆಟಗಾರ ಲಿಟನ್ ದಾಸ್ ಶತಕದ ನೆರವಿನಿಂದ 48.3 ಓವರ್ ಗಳಲ್ಲಿ 222 ರನ್ ಕಲೆ ಹಾಕಿದೆ.
ಬಾಂಗ್ಲಾ ಪರವಾಗಿ ಲಿಟನ್ ದಾಸ್ 12 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 121 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದ್ದರು.
ಇನ್ನು ಮೆಹಿದಿ ಹಸನ್ (32), ಸೌಮ್ಯ ಸರ್ಕಾರ್ (33) ರನ್ ಕಲೆಹಾಕಿದ್ದರು. ಇದರ ಹೊರತಾಗಿ ಮತ್ತಾರೂ ಎರಡಂಕಿ ಸಹ ತಲುಪುವುದಕ್ಕೆ ವಿಫಲರಾದರೆನ್ನುವುದು ಗಮನಾರ್ಹ.
ಭಾರತದ ಪರ ಕುಲದೀಪ್ ಯಾದವ್ 3, ಕೇದಾರ್ ಜಾಧವ್ 2 ಹಾಗೂ ಬುಮ್ರಾ ಹಾಗೂ ಚಹಾಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದ್ದಾರೆ.
ಇದೀಗ ಭಾರತಕ್ಕೆ ದಾಖಲೆಯ ಏಳನೇ ಏಷ್ಯಾಕಪ್ ಪ್ರಶಸ್ತಿ ಜಯಿಸಲು 223 ರನ್ ಗಳಿಸಬೇಕಿದೆ.
Bangladesh are all out for 222!
Liton Das' phenomenal 121 provided more than half their total, while spinners Kuldeep Yadav (3/45) and Kedar Jadhav (2/41) did most of the damage for India.
Who's on top at the halfway stage?#INDvBAN LIVE
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ