ಏಷ್ಯಾ ಕಪ್: ಭಾರತ-ಬಾಂಗ್ಲಾ ಪಂದ್ಯಗಳಲ್ಲಿ ಟಾಪ್ 5 ಸಾರ್ವಕಾಲಿಕ ಅತೀ ಹೆಚ್ಚು ರನ್ ಸಿಡಿಸಿದ ದಾಂಡಿಗರು!

2018ರ ಏಷ್ಯಾ ಕಪ್ ಚಾಂಪಿಯನ್ ಪಟ್ಟಕ್ಕಾಗಿ ಟೀಂ ಇಂಡಿಯಾ ಹಾಗೂ ಬಾಂಗ್ಲಾದೇಶ ಸೆಣೆಸಲಿದ್ದು ಈ ಹಿಂದಿನ ಪಂದ್ಯಗಳಲ್ಲಿ ಉಭಯ ತಂಡದ ಆಟಗಾರರು ಅತೀ ಹೆಚ್ಚು ರನ್ ಸಿಡಿಸಿದ...
ಕೊಹ್ಲಿ-ಗಂಗೂಲಿ-ರಹೀಂ-ರೈನಾ
ಕೊಹ್ಲಿ-ಗಂಗೂಲಿ-ರಹೀಂ-ರೈನಾ
ನವದೆಹಲಿ: 2018ರ ಏಷ್ಯಾ ಕಪ್ ಚಾಂಪಿಯನ್ ಪಟ್ಟಕ್ಕಾಗಿ ಟೀಂ ಇಂಡಿಯಾ ಹಾಗೂ ಬಾಂಗ್ಲಾದೇಶ ಸೆಣೆಸಲಿದ್ದು ಈ ಹಿಂದಿನ ಪಂದ್ಯಗಳಲ್ಲಿ ಉಭಯ ತಂಡದ ಆಟಗಾರರು ಅತೀ ಹೆಚ್ಚು ರನ್ ಸಿಡಿಸಿದ ಸಾರ್ವಕಾಲಿಕ ಐವರು ಆಟಗಾರರ ಪಟ್ಟಿ ಇಲ್ಲಿದೆ. 
ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನ ತಮ್ಮ 100ನೇ ಶತಕವನ್ನು ಬಾಂಗ್ಲಾದೇಶದ ಮೇಲೆ ಸಿಡಿಸಿದ್ದರು. ಆದರೆ ಅವರು ಈ ಟಾಪ್ ಐದರ ಪಟ್ಟಿಯಲ್ಲಿ ಸ್ಥಾನಪಡೆದಿಲ್ಲ. 
ವಿರಾಟ್ ಕೊಹ್ಲಿ
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು 2014ರ ಏಷ್ಯಾ ಕಪ್ ಟೂರ್ನಿಯಲ್ಲಿ ಫೆಬ್ರವರಿ 26ರಂದು ಫತುಲ್ಲಾದಲ್ಲಿ ನಡೆದ ಬಾಂಗ್ಲಾ ಹಾಗೂ ಭಾರತ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು 122 ಎಸೆತದಲ್ಲಿ 136 ರನ್ ಬಾರಿಸಿದ್ದು ಏಷ್ಯಾ ಕಪ್ ನಲ್ಲಿ ವೈಯಕ್ತಿಕವಾಗಿ ಅತೀ ಹೆಚ್ಚು ರನ್ ಸಿಡಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 
ಸೌರವ್ ಗಂಗೂಲಿ
ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರು 2000ನೇ ಇಸವಿಯಲ್ಲಿ ನಡೆದ ಏಷ್ಯಾ ಕಪ್ ನಲ್ಲಿ ಢಾಕಾದಲ್ಲಿ ನಡೆದ ಪಂದ್ಯದಲ್ಲಿ 124 ಎಸೆತಗಳಲ್ಲಿ ಅಜೇಯ 135 ರನ್ ಗಳಿಸಿದ್ದು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 
ಮುಶ್ಫಿಕರ್ ರಹೀಂ 
ಬಾಂಗ್ಲಾದೇಶದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮನ್ ಮುಶ್ಫಿಕರ್ ರಹೀಂ 2014ರ ಏಷ್ಯಾ ಕಪ್ ಟೂರ್ನಿಯ ಫತುಲ್ಹಾದಲ್ಲಿ ನಡೆದ ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಮುಶ್ಫಿಕರ್ 117 ರನ್ ಬಾರಿಸಿದ್ದು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 
ಸುರೇಶ್ ರೈನಾ
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಸುರೇಶ್ ರೈನಾ ಅವರು 2008ರ ಏಷ್ಯಾ ಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರೈನಾ 107 ಎಸೆತಗಳಲ್ಲಿ ಅಜೇಯ 116 ರನ್ ಸಿಡಿಸಿದ್ದರು. 
ಅಲೋಕ್ ಕಪಾಲಿ
ಬಾಂಗ್ಲಾದೇಶದ ಮಾಜಿ ಆಟಗಾರ ಅಲೋಕ್ ಕಪಾಲಿ, ಕರಾಚಿಯಲ್ಲಿ 2008ರಲ್ಲಿ ನಡೆದ ಏಷ್ಯಾ ಕಪ್ ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ 97 ಎಸೆತಗಳಲ್ಲಿ 115 ರನ್ ಬಾರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com