ರಿಷಬ್ ಪಂತ್
ಕ್ರಿಕೆಟ್
ಶಿಖರ್ ಧವನ್ ಪುತ್ರನಿಗೆ 'ಬೇಬಿ ಸಿಟ್ಟರ್' ಆದ ರಿಷಬ್ ಪಂತ್, ವಿಡಿಯೋ ವೈರಲ್!
ಆಸ್ಟ್ರೇಲಿಯಾ ವಿರುದ್ಧ ಟಿಮ್ ಪೈನ್ ಜೊತೆಗಿನ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಬೇಬಿ ಸಿಟ್ಟರ್ ವಿವಾದ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ರಿಷಬ್ ಪಂತ್ ಮಗುವಿನೊಂದಿಗೆ ಆಟವಾಡುತ್ತಿರುವ...
ಕೊಲ್ಕತ್ತಾ: ಆಸ್ಟ್ರೇಲಿಯಾ ವಿರುದ್ಧ ಟಿಮ್ ಪೈನ್ ಜೊತೆಗಿನ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಬೇಬಿ ಸಿಟ್ಟರ್ ವಿವಾದ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ರಿಷಬ್ ಪಂತ್ ಮಗುವಿನೊಂದಿಗೆ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು ನೆಟಿಗರು ಕಾಲೆಳೆದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನಡುವಿನ ಪಂದ್ಯದ ವೇಳೆ ಧವನ್ ರ ಮಗನೊಂದಿಗೆ ರಿಷಬ್ ಪಂತ್ ಆಡಿದ ಆಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ಧವನ್ ಪುತ್ರ ಜೊರಾವರ್ ನೊಂದಿಗೆ ಸಮಯ ಕಳೆದಿದ್ದರು. ಟವೆಲ್ ಹಿಡಿದುಕೊಂಡು ಪಂತ್ ಧವನ್ ಪುತ್ರನನ್ನು ಮೇಲಕ್ಕೆತ್ತಿ ತಿರುಗಿಸಿ ಮುದ್ದು ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾರಣಬಹುದಾಗಿದೆ.
ಧವನ್ ಪುತ್ರನನ್ನು ಎತ್ತಿ ಸುತ್ತಾಡಿಸಿದ್ದ ಬಗ್ಗೆ ಕೆಲ ಟ್ವೀಟರ್ ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಆಕಸ್ಮಾತ್ ಹೆಚ್ಚು ಕಮ್ಮಿ ಆಗಿದ್ದರೆ ಏನಾಗುತ್ತಿತ್ತು ಎಂದು ಬರೆದುಕೊಂಡಿದ್ದಾರೆ.
ಇನ್ನು ಕೆಲವರು ಮಕ್ಕಳೊಂದಿಗೆ ಅಪಾಯಕಾರಿ ಆಟ ಆಡುವುದು ಅಷ್ಟು ಉತ್ತಮವಲ್ಲ ಎಂಬ ಸಲಹೆಯನ್ನು ಪಂತ್ ಗೆ ನೀಡಿದ್ದಾರೆ. ಮತ್ತೆ ಪಂತ್ ಒಬ್ಬ ಉತ್ತಮ ಬೇಬಿ ಸಿಟ್ಟರ್ ಎಂದು ಈ ಮೂಲಕ ಪ್ರೂವ್ ಮಾಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.
Dear @tdpaine36,
Pls be careful next time you ask Rishabh Pant to babysit.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ