ಸಂಗ್ರಹ ಚಿತ್ರ
ಕ್ರಿಕೆಟ್
ಐಪಿಎಲ್ ಪಂದ್ಯದ ವೇಳೆ ಕುಡಿದು ಕ್ರೀಡಾಂಗಣದಲ್ಲಿ ಅಸಭ್ಯ ವರ್ತನೆ, ಗಲಾಟೆ; ನಿರೂಪಕಿ ಸೇರಿ 6 ಬಂಧನ!
ಕುಡಿದ ಮತ್ತಿನಲ್ಲಿ ಕ್ರೀಡಾಂಗಣದಲ್ಲಿ ಅಸಭ್ಯವಾಗಿ ವರ್ತಿಸಿದ್ದು ಅಲ್ಲದೆ ಪಂದ್ಯ ವೀಕ್ಷಿಸಲು ಅಡ್ಡಿಪಡಿಸಿದ ಕಾರಣ ನಿರೂಪಕಿ ಸೇರಿ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್: ಕುಡಿದ ಮತ್ತಿನಲ್ಲಿ ಕ್ರೀಡಾಂಗಣದಲ್ಲಿ ಅಸಭ್ಯವಾಗಿ ವರ್ತಿಸಿದ್ದು ಅಲ್ಲದೆ ಪಂದ್ಯ ವೀಕ್ಷಿಸಲು ಅಡ್ಡಿಪಡಿಸಿದ ಕಾರಣ ನಿರೂಪಕಿ ಸೇರಿ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್ ಮತ್ತು ಕೊಲ್ಕತ್ತಾ ನಡುವೆ ನಡೆದ ಪಂದ್ಯದ ವೇಳೆ ಭರತ್ ಫೈನಾನ್ಸಿಯಲ್ ಇನ್ಕ್ಲೂಷನ್ ಲಿ. ಕಂಪನಿಯ ಉಪಾಧ್ಯಕ್ಷ ಸಂತೋಷ್ ಉಪಾಧ್ಯಾಯ್ ಎಂಬುವರು ಉಪ್ಪಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಿರೂಪಕಿ ಪ್ರಶಾಂತಿ ಸೇರಿದಂತೆ ಕೆಲ ಯುವಕರು ಪಂದ್ಯ ನೋಡಲು ಅಡ್ಡಿ ಪಡಿಸಿ ದಾಂಧಲೆ ನಡೆಸಿದ್ದರು ಎಂದು ದೂರಿದ್ದಾರೆ. ಈ ದೂರಿನನ್ವಯ ಪೊಲೀಸರು ಪ್ರಶಾಂತಿ, ಕೆ ಪೂರ್ಣಿಮಾ, ಕೆ ಪ್ರಿಯಾ, ವಿ ಶ್ರೀಕಾಂತ್ ರೆಡ್ಡಿ, ಎಲ್ ಸುರೇಶ್ ಹಾಗೂ ಜಿ ವೇಣುಗೋಪಾಲ್ ಎಂಬುವರನ್ನು ಬಂಧಿಸಿ ಎಫ್ಐಆರ್ ದಾಖಲಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ