ವಿಂಡೀಸ್ ವಿರುದ್ಧ ಮೊದಲ ಟಿ20: ಭಾರತಕ್ಕೆ 4 ವಿಕೆಟ್ ಭರ್ಜರಿ ಜಯ

ಭಾರತ-ವೆಸ್ಟ್ ಇಂಡೀಸ್ ನಡುವಣ ಮೊದಲ ಟಿ20ನಲ್ಲಿ ಟೀಂ ಇಂಡಿಯಾ ನಾಲ್ಕು ವಿಕೆಟ್ ಗಳ ಗೆಲುವು ಸಾಧಿಸಿದೆ.
ವಿಂಡೀಸ್ ವಿರುದ್ಧ ಮೊದಲ ಟಿ20: ಭಾರತಕ್ಕೆ 4 ವಿಕೆಟ್ ಭರ್ಜರಿ ಜಯ
ವಿಂಡೀಸ್ ವಿರುದ್ಧ ಮೊದಲ ಟಿ20: ಭಾರತಕ್ಕೆ 4 ವಿಕೆಟ್ ಭರ್ಜರಿ ಜಯ
Updated on
ಫ್ಲೋರಿಡಾ: ಭಾರತ-ವೆಸ್ಟ್ ಇಂಡೀಸ್ ನಡುವಣ ಮೊದಲ ಟಿ20ನಲ್ಲಿ ಟೀಂ ಇಂಡಿಯಾ ನಾಲ್ಕು ವಿಕೆಟ್ ಗಳ ಗೆಲುವು ಸಾಧಿಸಿದೆ.
ವಿಂಡೀಸ್ ಪಡೆ ಒಡ್ಡಿದ್ದ 96 ರನ್ ಗಳ ಸುಲಭ ಗುರಿಯನ್ನು ಬೆನ್ನತ್ತಿದ ಭಾರತ 17.2  ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದಂತಾಗಿದೆ.
ಟೀಂ ಇಂಡಿಯಾ ಪರ ಖರ್ ಧವನ್ (1),  ರೋಹಿತ್ ಶರ್ಮಾ(24), ನಾಯಕ ವಿರಾಟ್ ಕೊಹ್ಲಿ (19) ಕೃುಣಾಲ್ ಪಾಂಡ್ಯ (12) ರವೀಂದ್ರ ಜಡೇಜಾ (10*) ಹಾಗೂ ವಾಷಿಂಗ್ಟನ್ ಸುಂದರ್ (8*) ರನ್ ಗಳಿಸಿದ್ದರು.

ವಿಂಡೀಸ್ ಪರವಾಗಿ ನರೇನ್, ಕೊಟ್ರೇಲ್ ಹಾಗೂ ಪಾಲ್ ತಲಾ ಎರಡು ವಿಕೆಟ್ ಕಬಳಿಸಿದ್ದರು 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com