ನವದೀಪ್ ಸೈನಿ, ಭುವನೇಶ್ವರ್ ಕುಮಾರ್, ವಿರಾಟ್ ಕೊಹ್ಲಿ
ಕ್ರಿಕೆಟ್
ಪ್ರತಿಭಾವಂತ ಆಟಗಾರ ನವದೀಪ್ ಸೈನಿಗೆ ಉತ್ತಮ ಭವಿಷ್ಯವಿದೆ- ವಿರಾಟ್ ಕೊಹ್ಲಿ
ಪ್ರತಿಭಾವಂತ ಆಟಗಾರ ನವದೀಪ್ ಸೈನಿಗೆ ಉತ್ತಮ ಭವಿಷ್ಯವಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊಂಡಾಡಿದ್ದಾರೆ.
ಫ್ಲಾರಿಡಾ: ಪ್ರತಿಭಾವಂತ ಆಟಗಾರ ನವದೀಪ್ ಸೈನಿಗೆ ಉತ್ತಮ ಭವಿಷ್ಯವಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊಂಡಾಡಿದ್ದಾರೆ.
ವೆಸ್ಟ್ ಇಂಡೀಸ್ ಎದುರಿನ ಮೊದಲ ಟಿ-20 ಪಂದ್ಯವನ್ನು ಗೆದ್ದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯ ನವದೀಪ್ ಐಪಿಎಲ್ ಟೂರ್ನಿಯಲ್ಲೂ ಚೆನ್ನಾಗಿ ಆಡಿದ್ದರು.
ಅವರೊಬ್ಬ ಪ್ರತಿಭಾವಂತ ಆಟಗಾರನಾಗಿದ್ದು, ಇಲ್ಲಿಂದಲೇ ಅವರು ಬೆಳೆಯಲಿದ್ದಾರೆ ಎಂದು ಭವಿಷ್ಯ ನುಡಿದರು.
ಈ ಪಂದ್ಯದಲ್ಲಿ 26 ವರ್ಷದ ನವದೀಪ್ ಸೈನಿ, 17 ರನ್ ಗಳಿಗೆ ಪ್ರಮುಖ ಮೂರು ವಿಕೆಟ್ ಕಬಳಿಸುವ ಮೂಲಕ ಭಾರತ ನಾಲ್ಕು ವಿಕೆಟ್ ಗಳಿಂದ ಗೆಲುವು ಸಾಧಿಸಲು ಪ್ರಮುಖ ಪಾತ್ರ ವಹಿಸಿದ್ದರು.
ನಮ್ಮ ಬೌಲಿಂಗ್ ಮತ್ತು ಕ್ಷೇತ್ರ ರಕ್ಷಣೆ ಸರಿಯಾಗಿಯೇ ಇತ್ತು. ಆದರೆ, ಪಿಚ್ ಅತ್ಯುತ್ತಮವಾಗಿರಲಿಲ್ಲ.ಮೊದಲು ಆಡಿದ ವೆಸ್ಟ್ ಇಂಡೀಸ್ ಉತ್ತಮ ರೀತಿಯಲ್ಲಿ ಆಡಿದರು. ನಾಲ್ಕು ವಿಕೆಟ್ ಗಳಲ್ಲಿಯೇ ಗುರಿ ಮುಟ್ಟಬೇಕು ಅಂದುಕೊಂಡಿದ್ದೇವು ಆದರೆ, ಬಾಲ್ ಹಳೆಯದಾಗಿದ್ದರಿಂದ ಸ್ವಲ್ಪ ತೊಂದರೆ ತೆಗೆದುಕೊಳ್ಳಬೇಕಾಯಿತು ಎಂದು ತಿಳಿಸಿದರು.
ಎರಡನೇ ಟಿ-20 ಪಂದ್ಯದಲ್ಲೂ ಉತ್ತಮ ರೀತಿಯ ಪ್ರದರ್ಶನ ನೀಡಲಾಗುವುದು ಎಂದು ವಿರಾಟ್ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ