

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಾವು ಮೈದಾನದಲ್ಲಿರಲಿ ಬಿಡಲಿ ಆಗಾಗ ಸುದ್ದಿಯಾಗುವುದು ಖಚಿತ. ಅದರಂತೆ ಧೋನಿ ಶನಿವಾರ ಜೈಪುರದಲ್ಲಿ ತಾವು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.
ಜೈಪುರ ವಿಮಾನ ನಿಲ್ದಾಣದಲ್ಲಿ ಶನಿವಾರ ಧೋನಿ ತಲೆಗೆ ಕಪ್ಪು ಬಂದಾನ ಧರಿಸಿರುವ ದೃಶ್ಯಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಸ್ವಾಗತದ ನಡುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಲಲು ಆಗಮಿಸಿದ್ದಾಗ ಅವರು ತಲೆಗೆ ಕಪ್ಪು ಬಂದಾನ ಧರಿಸಿದ್ದರು.
ವಿಮಾನ ನಿಲ್ದಾಣದ ಹೊರಗಿನ ಜನಸಂದಣಿ ಹೆಚ್ಚಾಗಿದ್ದರಿಂದ ಧೋನಿ ಅವರನ್ನು ತಮ್ಮ ಕಾರಿಗೆ ಕರೆದೊಯ್ಯಲು ಭದ್ರತಾ ಸಿಬ್ಬಂದಿ ಶ್ರಮಿಸಬೇಕಾಯಿತು. ವೀಡಿಯೊದಲ್ಲಿ, ರಾಂಚಿ ಮೂಲದ ಕ್ರಿಕೆಟಿಗ ತನಗೆ ತೆರಳಲು ದಾರಿ ಬಿಡುವಂತೆ ಅಭಿಮಾನಿಗಳಿಗೆ ಮನವಿ ಮಾಡಿಕೊಳ್ಳುತ್ತಿರುವುದನ್ನು ಕಾಣಬಹುದು.
ಧೋನಿ ಪ್ರಸ್ತುತ ಕ್ರಿಕೆಟ್‌ನಿಂದ ಎರಡು ತಿಂಗಳ ವಿರಾಮದಲ್ಲಿದ್ದು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಸ್ಥಾನವನ್ನು ಪಡೆದುಕೊಂಡಿದ್ದಾರೆ.