ವಿರಾಟ್ ಕೊಹ್ಲಿ ಕ್ಯಾಚಿಂಗ್
ಕ್ರಿಕೆಟ್
ಟೀಂ ಇಂಡಿಯಾ ನಾಯಕ ಕೊಹ್ಲಿಯ 'ಸ್ಟನಿಂಗ್ ಕ್ಯಾಚ್' ವಿಡಿಯೋ ವೈರಲ್
ಭಾನುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ- ಟ್ವೆಂಟಿ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಮಿಂಚದಿದ್ದರೂ ಅವರ ಸ್ಟನಿಂಗ್ ಕ್ಯಾಚಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಿರುವನಂತಪುರಂ: ಭಾನುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ- ಟ್ವೆಂಟಿ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಮಿಂಚದಿದ್ದರೂ ಅವರ ಸ್ಟನಿಂಗ್ ಕ್ಯಾಚಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರವೀಂದ್ರ ಜಡೇಜಾ ಅವರ ಬೌಲಿಂಗ್ ನಲ್ಲಿ ಮೈದಾನದ ಅಂಚಿನಲ್ಲಿ ಅಥ್ಲೀಟ್ ನಂತೆ ಜಿಗಿದು ಬೌಂಡರಿಯತ್ತ ಸಾಗುತ್ತಿದ್ದ ಚೆಂಡನ್ನು ಕ್ಯಾಚ್ ಪಡೆಯುವ ಮೂಲಕ ವಿಂಡೀಸ್ ಬ್ಯಾಟ್ಸ್ ಮನ್ ಶಿಮ್ರಾನ್ ಹೆಟ್ಮಿಯರ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು.
ವಿರಾಟ್ ಕೊಹ್ಲಿ ಚೆಂಡನ್ನು ಬೀಳಿಸದೆ, ಬೌಂಡರಿ ಹಗ್ಗವನ್ನು ಮುಟ್ಟದಂತೆ ನೋಡಿಕೊಳ್ಳುವ ಮೂಲಕ ಇತರ ಕ್ಷೇತ್ರ ರಕ್ಷಕರಿಗೆ ಸ್ಪೂರ್ತಿಯಾದರು.
ಫೀಲ್ಡಿಂಗ್ ನಲ್ಲಿ ಕೊಹ್ಲಿಯ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ. ಆಟದಲ್ಲಿನ ಅವರ ಬದ್ಧತೆಯನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

