ಮೂರನೇ ಟಿ-20 ಪಂದ್ಯ: ಭಾರತ-ವಿಂಡೀಸ್ ನಡುವೆ ಹೈ ವೋಲ್ಟೇಜ್ ಕದನ

ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿರುವ ಭಾರತ ಹಾಗೂ ವೆಸ್ಟ್‌ ಇಂಡೀಸ್ ತಂಡಗಳು ನಾಳೆ ನಡೆಯುವ ಮೂರನೇ ಅಥವಾ ನಿರ್ಣಾಯಕ ಪಂದ್ಯದ ಗೆಲುವಿನ ಮೇಲೆ ಚಿತ್ತ ನೆಟ್ಟಿವೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ನಾಯಕರು
ಭಾರತ ಹಾಗೂ ವೆಸ್ಟ್ ಇಂಡೀಸ್ ನಾಯಕರು

ಮುಂಬೈ: ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿರುವ ಭಾರತ ಹಾಗೂ ವೆಸ್ಟ್‌ ಇಂಡೀಸ್ ತಂಡಗಳು ನಾಳೆ ನಡೆಯುವ ಮೂರನೇ ಅಥವಾ ನಿರ್ಣಾಯಕ ಪಂದ್ಯದ ಗೆಲುವಿನ ಮೇಲೆ ಚಿತ್ತ ನೆಟ್ಟಿವೆ. ಉಭಯ ತಂಡಗಳ ನಡುವಿನ ಹೈ ವೋಲ್ಟೇಜ್ ಪಂದ್ಯಕ್ಕೆೆ  ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧವಾಗಿದೆ.

ಹೈದರಾಬಾದ್ ನಲ್ಲಿ ನಡೆದಿದ್ದ ಮೊದಲನೇ ಟಿ-20 ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಭಾರತ ತಂಡ, ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್  ಮೂರೂ ಕ್ಷೇತ್ರಗಳಲ್ಲಿನ ವೈಫಲ್ಯದಿಂದಾಗಿ ತಿರುವನಂತಪುರಂ ಪಂದ್ಯದಲ್ಲಿ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ವಿಶೇಷವಾಗಿ ಬೌಲಿಂಗ್‌ನಲ್ಲಿ ಟೀಮ್ ಇಂಡಿಯಾ ವಿಫಲವಾಗಿತ್ತು. ಹಾಗಾಗಿ, ವಿಂಡೀಸ್ ಎದುರು ಸೋಲು ಅನುಭವಿಸಿತ್ತು.

ಕಳೆದ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ವಿಭಾಗ ಗೌರವಯುತ ಮೊತ್ತ ಕಲೆ ಹಾಕಿತ್ತು. ಆದರೆ, ಕ್ಷೇತ್ರ ರಕ್ಷಣೆಯಲ್ಲಿ ವಿಫಲವಾಗಿದ್ದರಿಂದ ಎರಡನೇ ಪಂದ್ಯದಲ್ಲಿ ಭಾರತಕ್ಕೆೆ ಹಿನ್ನಡೆಯಾಗಿತ್ತು. ಎರಡೂ ಪಂದ್ಯಗಳಲ್ಲಿ ಹಲವು ಕ್ಯಾಚ್‌ಗಳನ್ನು ಕೈ ಚೆಲ್ಲಲಾಗಿತ್ತು. ಈ ಬಗ್ಗೆೆ ನಾಯಕ ವಿರಾಟ್, ಅಸಮಾಧಾನ ವ್ಯಕ್ತಪಡಿಸಿದ್ದರು. 

"ಕಳಪೆ ಫೀಲ್ಡಿಂಗ್ ಮಾಡಿದ್ದರ ಪರಿಣಾಮ ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಬೇಕಾಯಿತು. ನಾವು ಗಳಿಸಿದ್ದ ರನ್ ಕೂಡ ಕಡಿಮೆ ಇತ್ತು. ಕಳೆದ ಎರಡೂ ಪಂದ್ಯಗಳಲ್ಲಿ ನಾವು ಕ್ಷೇತ್ರ ರಕ್ಷಣೆಯಲ್ಲಿ ಎಡವಿದ್ದೇವೆ. ಹಲವು ಕ್ಯಾಾಚ್‌ಗಳನ್ನು ಬಿಟ್ಟಿದ್ದೇವೆ" ಎಂದು ಎರಡನೇ ಪಂದ್ಯದ ಬಳಿಕ ವಿರಾಟ್ ವಿಮರ್ಶೆ ಮಾಡಿಕೊಂಡಿದ್ದರು. ಹಾಗಾಗಿ, ನಾಳಿನ ಪಂದ್ಯದಲ್ಲಿ ಮಾಡಿದ ತಪ್ಪುುಗಳನ್ನು ತಿದ್ದಿಕೊಳ್ಳುವ ಸಾಧ್ಯತೆ ಇದೆ.

ಸ್ಟಾರ್ ಆರಂಭಿಕ ಬ್ಯಾಟ್ಸ್‌‌ಮನ್ ರೋಹಿತ್ ಶರ್ಮಾ ಎರಡೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದರು. ಇದು ತಂಡದ ಫಲಿತಾಂಶದ ಮೇಲೆ  ಗಂಭೀರ ಪರಿಣಾಮ ಬೀರಿದೆ. ಕೆ.ಎಲ್ ರಾಹುಲ್. ವಿರಾಟ್ ಕೊಹ್ಲಿ ಹಾಗೂ ಶಿವಂ ದುಬೆ ಅವರ ಬ್ಯಾಟ್‌ನಿಂದ ರನ್ ಮೂಡಿಬಂದಿದೆ. ಆ ಮೂಲಕ ಅಗ್ರ ಕ್ರಮಾಂಕದ ಬ್ಯಾಟಿಂಗ್ ವಿಭಾಗ ಬಲಿಷ್ಟವಾಗಿರುವುದು ಸಾಭೀತಾಗಿದೆ.

ಇದೀಗ ನಾಳಿನ ಪಂದ್ಯದಲ್ಲಿ ಭಾರತ ಪಂದ್ಯದ ಆರಂಭ ಹಾಗೂ ಕೊನೆಯ ಓವರ್‌ಗಳಲ್ಲಿ ಪುಟಿದೇಳುವ ಅಗತ್ಯತೆ ಇದೆ. ಏಕೆಂದರೆ ಕಳೆದ ಎರಡೂ ಈ ಪಂದ್ಯಗಳಲ್ಲಿ ಈ ಹಂತದಲ್ಲಿ ಭಾರತ ಎಡವಿತ್ತು. ಎರಡನೇ ಪಂದ್ಯದಲ್ಲಿ ಕೊನೆಯ ನಾಲ್ಕು ಓವರ್‌ಗಳಿಗೆ ಭಾರತ ಕೇವಲ 30 ರನ್ ಮಾತ್ರ  ಗಳಿಸಿತ್ತು. 

ಟೀಮ್ ಇಂಡಿಯಾ ಬೌಲಿಂಗ್ ವಿಭಾಗ ಎರಡು ಪಂದ್ಯಗಳಲ್ಲಿ ವೆಸ್ಟ್‌ ಇಂಡೀಸ್ ಬ್ಯಾಟ್ಸ್‌‌ಮನ್‌ಗಳ ಎದುರು ದುಬಾರಿಯಾಗಿದ್ದರು. ಆದರೆ, ನಾಳೆ ನಡೆಯುವ ಪಂದ್ಯದಲ್ಲಿ ಬೌಲರ್‌ಗಳು ಎದುರಾಳಿ ಬ್ಯಾಟ್ಸ್‌‌ಮನ್‌ಗಳನ್ನು ಕಟ್ಟಿ ಹಾಕಿದರೆ ಮಾತ್ರ ಭಾರತ ಸರಣಿ ಗೆಲ್ಲಲು ಸಾಧ್ಯ. ವಾಷಿಂಗ್ಟನ್ ಸುಂದರ್ ಹಾಗೂ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಮೇಲೆ  ಈ ಪಂದ್ಯದಲ್ಲಿ ಹೆಚ್ಚು ಗಮನ ಹರಿಸಲಾಗಿದೆ. ಹೆಚ್ಚಿನ ಒತ್ತಡದಲ್ಲಿರುವ ರಿಷಭ್ ಪಂತ್ ಅವರು ಕಳೆದ ಪಂದ್ಯದಲ್ಲಿ ಅಜೇಯ 33 ರನ್ ಗಳಿಸಿದ್ದರು. ಇದಕ್ಕೂ ಮುನ್ನ ಅವರು ಕಳೆದ ಐದು ಪಂದ್ಯಗಳಿಂದ ಕ್ರಮವಾಗಿ  18, 6, 27, 19, 4 ರನ್ ಗಳಿಸಿದ್ದರು.

ಪಂತ್ ಜತೆಗೆ, ವಾಷಿಂಗ್ಟನ್ ಸುಂದರ್ ಅವರಿಗೂ ಈ ಪಂದ್ಯ ಮುಖ್ಯವಾಗಿದೆ. ಇವರು ಕಳೆದ ಐದು ಟಿ-20 ಪಂದ್ಯಗಳಲ್ಲಿ 23 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್ ಪಡೆದು 144 ರನ್ ಬಿಟ್ಟುಕೊಟ್ಟಿದ್ದಾರೆ.

ಮತ್ತೊಂದೆಡೆ  ಕಳೆದ ಎರಡೂ ಪಂದ್ಯಗಳಲ್ಲಿ ತೋರಿದ ಪ್ರದರ್ಶನವನ್ನೇ ಮುಂದುವರಿಸಲು ಪ್ರವಾಸಿ ವೆಸ್ಟ್‌ ಇಂಡೀಸ್ ಯೋಜನೆ ಹಾಕಿಕೊಂಡಿದೆ. ಲೆಂಡ್ಲ್‌ ಸಿಮೋನ್ಸ್‌, ಶಿಮ್ರಾನ್ ಹೆಟ್ಮೇರ್, ನಿಕೋಲಸ್ ಪೂರನ್ ಹಾಗೂ ಎವಿನ್ ಲೆವಿಸ್ ಅತ್ಯುತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತದ ಬೌಲರ್‌ಗಳಿಗೆ ಚೆಂಡನ್ನು ಅಂಗಳದ ಎಲ್ಲ ಕಡೆ ಅಟ್ಟುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಇನ್ನೂ, ಬೌಲಿಂಗ್ ವಿಭಾಗದಲ್ಲಿ ಶೆಲ್ಡನ್ ಕಾಟ್ರೆೆಲ್ ಸೇರಿದಂತೆ ಕೆಸ್ರಿಕ್ ವಿಲಿಯಮ್ಸ್‌, ಲೆಗ್ ಸ್ಪಿನ್ನರ್ ಹೇಡನ್ ವಾಲ್ಷ್‌ ಹಾಗೂ ಹೋಲ್ಡರ್ ಸರಿಯಾದ ಜಾಗದಲ್ಲಿ ಬೌಲಿಂಗ್ ಮಾಡುವಲ್ಲಿ ಸಫಲರಾಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುವ ನಾಯಕ ಕಿರೋನ್ ಪೋಲಾರ್ಡ್, ಅವರು ಇಲ್ಲಿನ ವಾಂಖೆಡೆ ಅಂಗಳದಲ್ಲಿ ಆಡುತ್ತಿದ್ದಾರೆ. ಹಾಗಾಗಿ, ಈ ಪಂದ್ಯ ವಿಶೇಷತೆಯಿಂದ ಕೂಡಿದೆ.

ಸಂಭಾವ್ಯ ಆಟಗಾರರು:

ಭಾರತ: ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ಶಿವಂ ದುಬೆ, ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಾಹಲ್.

ವೆಸ್ಟ್‌ ಇಂಡೀಸ್: ಲೆಂಡ್ಲ್‌ ಸಿಮೋನ್ಸ್‌, ಎವಿನ್ ಲೆವಿಸ್, ಶಿಮ್ರಾನ್ ಹೆಟ್ಮೇರ್, ನಿಕೋಲಸ್ ಪೂರನ್, ಬ್ರೆೆಂಡನ್ ಕಿಂಗ್, ಕಿರೋನ್ ಪೊಲಾರ್ಡ್, ಜೇಸನ್ ಹೋಲ್ಡರ್, ಖಾರಿ ಪಿಯರಿ, ಹೇಡನ್ ವಾಲ್ಷ್‌, ಶೆಲ್ಡನ್ ಕಾಟ್ರೆೆಲ್, ಕೆಸ್ರಿಕ್ ವಿಲಿಯಮ್ಸ್‌.

ಸಮಯ: ನಾಳೆ ಸಂಜೆ 07:00 ಗಂಟೆಗೆ

ಸ್ಥಳ: ವಾಂಖೆಡೆ ಕ್ರೀಡಾಂಗಣ, ಮುಂಬೈ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com