ಹಿನ್ನೋಟ 2019: ಕೊಹ್ಲಿ ಆವೇಶಕ್ಕೆ ಮೈದಾನದಲ್ಲೇ ನಡುಗಿದ ಆಟಗಾರರು!

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅಗ್ರೇಸಿವ್ ಆಟಗಾರ. ಇನ್ನು ಮೈದಾನದಲ್ಲಿ ಎದುರಾಳಿ ಬೌಲರ್ ಗಳಿಗೆ ತಮ್ಮ ಬ್ಯಾಟ್ ಮೂಲಕವೇ ಉತ್ತರಿಸುವ ಕೊಹ್ಲಿ. ಒಂದೊಮ್ಮೆ ಅದಕ್ಕೆ ತಮ್ಮ ಹಾವ ಭಾವದ ಮೂಲಕ ತಿರುಗೇಟು ನೀಡಿದ್ದಾರೆ. ಇದು ಎದುರಾಳಿ ಬೌಲರ್ ಗಳೇ ಆಗಿರಬಹುದು, ಸಹ ಆಟಗಾರರು ಅಥವಾ ಅಂಪೈರ್ ಆಗಿರಬಹುದು. ಮೈದಾನದಲ್ಲಿ ಕೊಹ್ಲಿಯ ಆವೇಶದ ಕೆಲ ತುಣುಕುಗಳು ಇಲ್ಲಿವೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅಗ್ರೇಸಿವ್ ಆಟಗಾರ. ಇನ್ನು ಮೈದಾನದಲ್ಲಿ ಎದುರಾಳಿ ಬೌಲರ್ ಗಳಿಗೆ ತಮ್ಮ ಬ್ಯಾಟ್ ಮೂಲಕವೇ ಉತ್ತರಿಸುವ ಕೊಹ್ಲಿ. ಒಂದೊಮ್ಮೆ ಅದಕ್ಕೆ ತಮ್ಮ ಹಾವ ಭಾವದ ಮೂಲಕ ತಿರುಗೇಟು ನೀಡಿದ್ದಾರೆ. ಇದು ಎದುರಾಳಿ ಬೌಲರ್ ಗಳೇ ಆಗಿರಬಹುದು, ಸಹ ಆಟಗಾರರು ಅಥವಾ ಅಂಪೈರ್ ಆಗಿರಬಹುದು. ಮೈದಾನದಲ್ಲಿ ಕೊಹ್ಲಿಯ ಆವೇಶದ ಕೆಲ ತುಣುಕುಗಳು ಇಲ್ಲಿವೆ.

ಎದುರಾಳಿ ಬೌಲರ್ ಸುಮ್ಮನಾದ್ರೂ ಕೊಹ್ಲಿಯ ಆಕ್ರೋಶ ಮಾತ್ರ ತಣ್ಣಗಾಗಿರಲಿಲ್ಲ!
ವಿಂಡೀಸ್ ವಿರುದ್ಧದ ಟಿ20 ಸರಣಿಯನ್ನು ಟೀಂ ಇಂಡಿಯಾ ಭರ್ಜರಿಯಾಗಿ ಗೆದ್ದುಕೊಂಡಿದೆ. ಆದರೆ ಪಂದ್ಯದಲ್ಲಿ ಎದುರಾಳಿ ಬೌಲರ್ ನಿನ್ನ ಸಹವಾಸ ಬೇಡ ಎಂದು ಸುಮ್ಮನಾದ್ರೂ ವಿರಾಟ್ ಕೊಹ್ಲಿ ಮಾತ್ರ ಆತನನ್ನು ಕೆಣಕದೆ ಬಿಡಲಿಲ್ಲ.

 
 
 
 
 
 
 
 
 
 
 
 
 

Wohooooo - Look where I Hit that one #TeamIndia #INDvWI @paytm

A post shared by Team India (@indiancricketteam) on

ಕುಲ್‌ದೀಪ್ ಬೌಲಿಂಗ್‌ಗೆ ಮೈದಾನದಲ್ಲೇ ಕಿಡಿಕಾರಿದ ವಿರಾಟ್! ವಿಂಡೀಸ್ ವಿರುದ್ಧ ಮೂರನೇ ಏಕದಿನ ಸರಣಿ ನಿರ್ಣಾಯಕ ಪಂದ್ಯದಲ್ಲಿ ಕುಲದೀಪ್ ಯಾದವ್ ತಮ್ಮ ಬೌಲಿಂಗ್ ನಲ್ಲಿ ಸಿಕ್ಸರ್ ಗಳನ್ನು ಹೊಡೆಸಿಕೊಂಡಿದ್ದಕ್ಕೆ ಆಕ್ರೋಶಗೊಂಡ ಕೊಹ್ಲಿ ಮೈದಾನದಲ್ಲೇ ಕುಲ್ದೀಪ್ ವಿರುದ್ಧ ತಮ್ಮ ಸಿಟ್ಟನ್ನು ಹೊರಹಾಕಿದರು. ಕುಲದೀಪ್ ಬೌಲಿಂಗ್ ನಲ್ಲಿ ಪೊಲಾರ್ಡ್ ಸಿಕ್ಸರ್ ಬಾರಿಸಿದ್ದರು. ನಂತರ ಪೊಲಾರ್ಡ್ ಸಿಂಗಲ್ ತೆಗೆದುಕೊಂಡರು. ಈ ವೇಳೆ ಸ್ಟ್ರೈಕ್ ಗೆ ಬಂದ ಪೂರನ್ ಸಹ ಸಿಕ್ಸರ್ ಬಾರಿಸಿದ್ದು ಇದರಿಂದ ಆಕ್ರೋಶಗೊಂಡ ಕೊಹ್ಲಿ ನೀನು ಏನ್ ಬೌಲಿಂಗ್ ಮಾಡುತ್ತಿದ್ದೀಯಾ ಎಂದು ತಮ್ಮ ಸಿಟ್ಟನ್ನು ಹೊರಹಾಕಿದರು.

ಅಂಪೈರ್ ಎಡವಟ್ಟಿನ ವಿರುದ್ಧ ವಿರಾಟ್ ಕೊಹ್ಲಿ ಗರಂ!

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರ ರನೌಟ್ ಕುರಿತಂತೆ ಮೈದಾನದ ಅಂಪೈರ್ ಎಡವಟ್ಟಿನ ವಿರುದ್ಧ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗರಂ ಆಗಿದ್ದರು. ಅದು 48ನೇ ಓವರ್. ಕೆಮೋ ಪೌಲ್ ಬೌಲಿಂಗ್ ಮಾಡಿದ್ದು ಸ್ಟ್ರೈಕ್ ನಲ್ಲಿದ್ದ ಜಡೇಜಾ ಬಿರುಸಿನ ಹೊಡೆತಕ್ಕೆ ಮುಂದಾದರೂ ಆದರೆ ಚೆಂಡು ಫೀಲ್ಡರ್ ಕೈಸೇರಿತ್ತು. ಈ ವೇಳೆ ಸಿಂಗಲ್ ತೆಗೆದುಕೊಳ್ಳಲು ಓಡಿದರು. ಫೀಲ್ಡರ್ ಚೆಂಡನ್ನು ನಾನ್ ಸ್ಟ್ರೈಕ್ ನ ವಿಕೆಟ್ ಗೆ ಹೊಡೆದರು. ಇನ್ನು ಅಂಪೈರ್ ಜಡೇಜಾ ಚೆಂಡು ವಿಕೆಟ್ ಗೆ ಬಡಿಯುವುದಕ್ಕೂ ಮುನ್ನ ಕ್ರೀಸ್ ಗೆ ಬಂದಿದ್ದಾರೆ ಎಂದು ಭಾವಿಸಿ ಸುಮ್ಮನಿದ್ದರು. ಇನ್ನು ಫೀಲ್ಡರ್ ಗಳ ಸಹ ಪರಿಣಾಮಕಾರಿ ರನೌಟ್ ಅಪೀಲ್ ಮಾಡಲಿಲ್ಲ. ಇದರಿಂದ ಮೈದಾನದ ಅಂಪೈರ್ ಸಹ ಸುಮ್ಮನಾಗಿದ್ದರು. ಆದರೆ ಟೆಲಿವಿಷನ್ ರಿಪ್ಲೇ ನಂತರ ಮೈದಾನದ ಅಂಪೈರ್ ಮೂರನೇ ಅಂಪೈರ್ ಮನವಿ ಮಾಡಿದ ನಂತರ ರನೌಟ್ ಪರಿಶೀಲನೆ ಮಾಡಿದ ಮೂರನೇ ಅಂಪೈರ್ ರನೌಟ್ ಆಗಿರುವುದಾಗಿ ಮೈದಾನದ ಅಂಪೈರ್ ಗೆ ಸೂಚಿಸಿದ್ದರಿಂದ ಜಡೇಜಾ ರನೌಟ್ ಆಗಿ ಪೆವಿಲಿಯನ್ ಸೇರಬೇಕಾಯಿತು. ಇದರಿಂದ ಕೋಪಗೊಂಡಿರುವ ಕೊಹ್ಲಿ ಬೌಂಡರಿ ಗೆರೆ ಬಳಿ ಬಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಸಿಕ್ಸ್ ಬಾರಿಸಿ ಕೊಹ್ಲಿ 'ನೋಟ್‌ಬುಕ್‌ನಲ್ಲಿ' ಬರೆದು ಬೌಲರ್‌ಗೆ ಎಚ್ಚರಿಕೆ ಕೊಟ್ಟಿದ್ದರು!

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಮ್ಮನ್ನು ಹೀಯಾಳಿಸಿದವರನ್ನು ಅಷ್ಟು ಸುಲಭಕ್ಕೆ ಮರೆಯುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ಹೌದು ಎರಡು ವರ್ಷಗಳ ಹಿಂದೆ ವಿಂಡೀಸ್ ಬೌಲರ್ ಕೊಹ್ಲಿ ವಿಕೆಟ್ ಪಡೆದು ಹೀಯಾಳಿಸಿದ್ದಕ್ಕೆ ವೀರಾವೇಶದ ಪ್ರದರ್ಶನ ನೀಡಿ ಬೌಲರ್ ಬೆವರಿಳಿಸಿದ್ದರು. 2017ರಲ್ಲಿ ವಿಂಡೀಸ್ ಪ್ರವಾಸದಲ್ಲಿ ಜಮೈಕಾ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ವಿರಾಟ್ ಕೊಹ್ಲಿಯ ವಿಕೆಟ್ ಪಡೆದಿದ್ದ ವಿಲಿಯಮ್ಸ್ ಅಂದು ನೋಟ್ ಬುಕ್ ನಲ್ಲಿ ಬರೆದಿಡುವಂತೆ ಸನ್ಹೆ ಮಾಡಿದ್ದರು. ಇದಾದ ಎರಡು ವರ್ಷಗಳ ಬಳಿಕ ವಿಲಿಯಮ್ಸ್ ಗೆ ಭರ್ಜರಿ ಸಿಕ್ಸರ್ ಬಾರಿಸಿದ ಕೊಹ್ಲಿ ಅದೇ ನೋಟ್ ಬುಕ್ ಸನ್ಹೆ ಮೂಲಕ ತಿರುಗೇಟು ನೀಡಿದ್ದರು.

 
 
 
 
 
 
 
 
 
 
 
 
 

You do not mess with the Skip! #TeamIndia #INDvWI @paytm

A post shared by Team India (@indiancricketteam) on

ಪೂಜಾರ ಕಿಚಾಯಿಸಿದ ರಬಾಡಗೆ ಮೈದಾನದಲ್ಲೇ ತಿರುಗೇಟು ನೀಡಿದ ಕೊಹ್ಲಿ!

ದಕ್ಷಿಣ ಆಫ್ರಿಕಾದ ಯುವ ವೇಗಿ ಕಾಗಿಸೋ ರಬಾಡ ತಮ್ಮ ಟೆಂಪರ್ ಕಳೆದುಕೊಂಡು ಹುಚ್ಚಾಟವಾಡಿದ್ದರು. ವಿಕೆಟ್ ಬೀಳದ ಹಿನ್ನೆಲೆಯಲ್ಲಿ ಹತಾಶೆಗೊಂಡಿದ್ದ ರಬಾಡ ಪೂಜಾರ ಔಟ್ ಆಗಿದ್ದೆ ತಡ ಅವರನ್ನು ಸ್ಲೇಡ್ಜ್ ಮಾಡಿದ್ದರು. ಇದಕ್ಕೆ ಕೊಹ್ಲಿ ಮೈದಾನದಲ್ಲೇ ತಿರುಗೇಟು ನೀಡಿದ್ದರು. ಅರ್ಧ ಶತಕ ಬಾರಿಸಿ ಉತ್ತಮವಾಗಿ ಆಡುತ್ತಿದ್ದ ಚೇತೇಶ್ವರ ಪೂಜಾರ ಅವರನ್ನು ಔಟ್ ಮಾಡಿದ ರಬಾಡ ಸಂಭ್ರಮಾಚರಣೆ ಮಾಡುತ್ತಾ ಪೂಜಾರ ಬಳಿ ಬಂದು ಅಸಭ್ಯವಾದ ಶಬ್ದ ಬಳಕೆ ಮಾಡಿದ್ದರು. ಇದನ್ನು ತಿಳಿದ ಕೊಹ್ಲಿ ಮಾರನೇ ದಿನ ರಬಾಡ ಓವರ್ ಥ್ರೋ ಎಸೆದಾಗ ಮೈದಾನದಲ್ಲೇ ಹೆಬ್ಬೆರಳನ್ನು ತೋರಿಸಿ ಅಣಕಿಸಿದರು. ಸಿಂಗಲ್ ರನ್ ಕೊಡುವ ಜಾಗದಲ್ಲಿ ರಬಾಡ ಎಸೆದ ಓವರ್ ಥ್ರೋ ಬೌಂಡರಿ ಗೆರೆ ಮುಟ್ಟಿತ್ತು. ಇದರಿಂದ ಸಂತುಷ್ಟನಾದ ಕೊಹ್ಲಿ ತಮ್ಮ ಹೆಬ್ಬೆರಳನ್ನು ತೋರಿಸುತ್ತಾ ಕೊಹ್ಲಿ ನಕ್ಕಿದರು. ಈ ವಿಡಿಯೋ ಇದೀಗ ವೈರಲ್ ಆಗಿತ್ತು.

ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಮೈದಾನದಲ್ಲೇ ಕೊಹ್ಲಿ ಆಕ್ರೋಶ!

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ ಗೆಲುವಿನ ನಗೆ ಬೀರಿದೆ. ಆದರೆ ಪಂದ್ಯದ ನಡುವೆ ವಿರಾಟ್ ಕೊಹ್ಲಿ ತಾಳ್ಮೆ ಕಳೆದುಕೊಂಡು ವೀರಾವೇಶ ತೋರಿಸಿದ್ದರು. ಮೊಹಾಲಿಯಲ್ಲಿನ ಟಿ20 ಪಂದ್ಯದಲ್ಲಿ ಆಫ್ರಿಕಾ ಬ್ಯಾಟಿಂಗ್ ವೇಳೆ ಹಾರ್ದಿಕ್ ಪಾಂಡ್ಯ 10ನೇ ಓವರ್ ಬೌಲಿಂಗ್ ಮಾಡಿದ್ದರು. ಈ ವೇಳೆ ತೆಂಬಾ ಬವುಮಾ ಮತ್ತು ಡಿ ಕಾಕ್ ಹೆಚ್ಚುವರಿ ರನ್ ಪಡೆದರು. ಇದನ್ನು ನೋಡಿದ ಕೊಹ್ಲಿ ಮೈದಾನದಲ್ಲೇ ಕೋಪಗೊಂಡರು. ಫೀಲ್ಡಿಂಗ್ ಮಾಡುತ್ತಿದ್ದ ಶ್ರೇಯಸ್ ಅಯ್ಯರ್ ಚೆಂಡನ್ನು ಸರಿಯಾಗಿ ಥ್ರೋ ಮಾಡದ ಪರಿಣಾಮ ಚೆಂಡನ್ನು ಹಾರ್ದಿಕ್ ಪಾಂಡ್ಯ ಹಿಡಿಯಲು ಸಾಧ್ಯವಾಗಲಿಲ್ಲ. ಇದರಿಂದ ಆಫ್ರಿಕಾ ಬ್ಯಾಟ್ಸ್ ಮನ್ ಗಳು ಹೆಚ್ಚುವರಿಯಾಗಿ 1 ರನ್ ಪಡೆದುಕೊಂಡರು. ನಂತರ ಕೈಗೆ ಬಂದ ಚೆಂಡನ್ನು ವಿಕೆಟ್ ಗೆ ಬಡಿದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಮುಯ್ಯಿಗೆ ಮುಯ್ಯಿ: ವಿಕೆಟ್ ಪಡೆದು ಅತಿರೇಕದ ವರ್ತನೆ ತೋರಿದ ಖಲೀಲ್‌ಗೆ ಕೊಹ್ಲಿ ಪ್ರತ್ಯುತ್ತರ!

ವಿಶ್ವ ಶ್ರೇಷ್ಠ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ವಿಕೆಟ್ ಪಡೆದರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ. ಅದೇ ರೀತಿ ಹೈದರಾಬಾದ್ ತಂಡದ ಬೌಲರ್ ಖಲೀಲ್ ಅಹ್ಮದ್ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಯ ವಿಕೆಟ್ ಪಡೆದ ನಂತರ ವಿಚಿತ್ರ ರೀತಿಯಲ್ಲಿ ಸಂಭ್ರಮಿಸಿದ್ದು ಇದೀಗ ಟ್ರೋಲ್ ಗೆ ಗುರಿಯಾಗುವಂತೆ ಮಾಡಿತ್ತು. ವಿರಾಟ್ ಕೊಹ್ಲಿ 7 ಎಸೆತದಲ್ಲಿ 16 ರನ್ ಗಳಿಸಿದ್ದಾಗ ಖಲೀಲ್ ಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ ವಿಕೆಟ್ ಪಡೆದ ಖುಷಿಯಲ್ಲಿ ಖಲೀಲ್ ವಿಚಿತ್ರವಾಗಿ ಸಂಭ್ರಸಿದ್ದರು. ಆರ್ಸಿಬಿ ಗೆಲುವಿನ ಬೆನ್ನಲ್ಲೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಹ್ಲಿ ವೇಗಿ ಖಲೀಲ್ ಅವರನ್ನು ಅವರದ್ದೇ ಶೈಲಿಯಲ್ಲಿ ಕಾಲೆಳೆದರು.

ಪಿಚ್ ಕ್ಯಾಚ್ ಹಿಡಿದು ಕ್ಯಾಚ್ ಹಿಡಿದಂತೆ ಬಿಲ್ಡಪ್ ಕೊಟ್ಟ ರಿಷಬ್, ಇಶಾಂತ್ ಜೊತೆ ಕೊಹ್ಲಿ ವಾಗ್ವಾದ!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಆರ್ಸಿಬಿ ತಂಡದ ಪ್ಲೇ ಆಫ್ ಕನಸು ಭಗ್ನಗೊಂಡಿತ್ತು. ಈ ಮಧ್ಯೆ ಪಂದ್ಯದ ವೇಳೆ ಪಿಚ್ ಕ್ಯಾಚ್ ಹಿಡಿದು ಕ್ಯಾಚ್ ಹಿಡಿದಂತೆ ಬಿಲ್ಡಪ್ ಕೊಟ್ಟ ರಿಷಬ್ ಪಂತ್ ರ ಉಪಟಳ ನೋಡಿ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ನಕ್ಕಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ತಿರುಗೇಟು ಅಂದ್ರೆ ಇದೇನಾ..? ಆಕ್ರೋಶಿತ ಸೆಂಡ್ ಆಫ್ ಕೊಟ್ಟ ಅಶ್ವಿನ್ ಗೆ ಭರ್ಜರಿ ಟಾಂಗ್ ಕೊಟ್ಟ ಕೊಹ್ಲಿ!

ವಿರಾಟ್ ಕೊಹ್ಲಿಯನ್ನು ಕೆಣಕಿ ತಿರುಗೇಟು ಪಡೆದ ಆಟಗಾರರ ಪಟ್ಟಿಗೆ ಇದೀಗ ಮತ್ತೋರ್ವ ಆಟಗಾರನ ಸೇರ್ಪಡೆಯಾಗಿದ್ದು, ಅದು ಬೇರಾರು ಅಲ್ಲ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com