
ಮೆಲ್ಬೋರ್ನ್: ಆಸ್ಟ್ರೇಲಿಯಾ ಹಿರಿಯ ವೇಗಿ ಪೀಟರ್ ಸಿಡ್ಲೆ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ಭಾನುವಾರ ವಿದಾಯ ಘೋಷಿಸಿದರು.
ಇಲ್ಲಿನ, ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಪಂದ್ಯದ ನಾಲ್ಕನೇ ದಿನ ಆರಂಭವಾಗುವುದಕ್ಕೂ ಮುನ್ನ ಪೀಟರ್ ಸಿಡ್ಲೆ ಆಸ್ಟ್ರೇಲಿಯಾ ತಂಡದ ಆಟಗಾರರ ಎದುರು ಭಾವನಾತ್ಮಕವಾಗಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಅಧಿಕೃತ ವೆಬ್ ಸೈಟ್ ವರದಿ ಮಾಡಿದೆ.
ಇನ್ನು ಸಿಡ್ಲೆ ದೇಶೀಯ ಕ್ರಿಕೆಟ್ ನಲ್ಲಿ ಮುಂದುವರಿಯಲಿದ್ದು ವಿಕ್ಟೋರಿಯಾ ಹಾಗೂ ಬಿಗ್ ಬ್ಯಾಶ್ಟಿ ೨೦ಲೀಗ್ ನಲ್ಲಿ ಅಡಿಲೇಡ್ ಸ್ಟ್ರೈಕ್ಸ್, ಇಂಗ್ಲಿಷ್ ಕೌಇಂಟಿ ಎಸ್ಟೆಕ್ಸ್ ಪರ ಆಡುವುದನ್ನು ಮುಂದುವರಿಸಲಿದ್ದಾರೆ.
೨೦೦೮ರಲ್ಲಿ ಭಾರತ ವಿರುದ್ಧ ಟೆಸ್ಟ್ ಮೂಲಕ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಕಾಲಿಟ್ಟಿದ್ದ ಆಟಗಾರ ತಮ್ಮ ಪಾದಾರ್ಪಣೆ ಪಂದ್ಯದಲ್ಲೇ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ವಿಕೆಟ್ ಕಿತ್ತು ಸಾಧನೆ ಮಾಡಿದ್ದರು.೨೦೧೦ರಲ್ಲಿ ಸಿಡ್ಲೆ ತಮ್ಮ ಜನ್ಮದಿನದಂದೇ ಹ್ಯಾಟ್ರಿಕ್ ವಿಕೆಟ್ ಸಾಧನೆ ಸಹ ಂಆಡಿದ್ದರು. ಇವರು ತಮ್ಮ ವೃತ್ತಿ ಜೀವನದಲ್ಲಿ ೨೦ ಅಂತರಾಷ್ಟ್ರೀಯ ಏಕದಿನ, ಎರಡು ಟಿ ೨೦ ಪಂದ್ಯಗಳನ್ನಾಡಿದ್ದಾರೆ.
ಇನ್ನು ಸಿಡ್ಲೆ ನಿವೃತ್ತಿ ಬಗ್ಗೆ ಹಲವಾರು ಆಟಗಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾ ತಂಡಕ್ಕೆ ದೀರ್ಘ ಅವಧಿಯಲ್ಲಿ ಹೃದಯ ಹಾಗೂ ಆತ್ಮವಾಗಿದ್ದ ಪೀಟರ್ ಸಿಡ್ಲೆ ಅವರನ್ನು ರಾಷ್ಟ್ರೀಯ ತಂಡದಿಂದ ಕಳೆದುಕೊಳ್ಳುತ್ತಿದ್ದೇನೆ ಎಂದು ಆಸೀಸ್ ಟೆಸ್ಟ್ ನಾಯಕ ಟಿಮ್ ಪೈನ್ ಹೇಳಿದ್ದಾರೆ.
ಅದ್ಬುತ ಅಂತಾರಾಷ್ಟ್ರೀಯ ವೃತ್ತಿ ಜೀವನ ಹೊಂದಿದ್ದ ಪೀಟರ್ ಸಿಡ್ಲೆ ಅವರಿಗೆ ನನ್ನ ನೆಚ್ಚಿನ ತಂಡದಲ್ಲಿ ಯಾವಾಗಲೂ ಮೊದಲ ಆಯ್ಕೆ ಎಂದು ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ ಹಿರಿಯ ವೇಗಿಯನ್ನು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಶ್ಲಾಘಿಸಿದ್ದಾರೆ.
Advertisement