
ಸಿಡ್ನಿ: ಇತ್ತೀಚಿಗೆ ಇಂಗ್ಲೆಂಡ್ ರಾಷ್ಟ್ರೀಯ ತಂಡ ವೆಸ್ಟ್ ಇಂಡೀಸ್ ವಿರುದ್ಧ 77 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸುದ್ದಿಯಾಗಿತ್ತು. ಆದರೆ, ಈಗ ದಕ್ಷಿಣ ಆಸ್ಟ್ರೇಲಿಯಾ ಮಹಿಳಾ ತಂಡ 10 ಓವರ್ ಗಳಲ್ಲಿ 10 ರನ್ ಗಳಿಗೆ ಆಲೌಟ್ ಆಗುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಕಳಪೆ ದಾಖಲೆ ಮಾಡಿದೆ.
ಆಸ್ಟ್ರೇಲಿಯಾದ ದೇಶಿಯಾ ಮಹಿಳಾ ಕ್ರಿಕೆಟ್ ಚಾಂಫಿಯನ್ ಷಿಪ್ ಪಂದ್ಯದಲ್ಲಿ ನ್ಯೂ ಸೌತ್ ವೇಲ್ಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಸ್ಟ್ರೇಲಿಯಾ ತಂಡ ಕೇವಲ 10 ರನ್ ಗಳಿಗೆ ಆಲೌಟ್ ಆಗಿದೆ. ದಕ್ಷಿಣ ಆಸ್ಟ್ರೇಲಿಯಾದ 10 ಆಟಗಾರ್ತಿಯರು ಡಕೌತ್ ಆಗಿದ್ದಾರೆ.
ಆರಂಭಿಕ ಆಟಗಾರ್ತಿ ಫೆಬಿ ಮಾನ್ಸೆಲ್ 4 ರನ್ ಗಳಿಸಿದರು. ಅದೂ ಒಂದು ಬೌಂಡರಿ ಮೂಲಕ , ಇನ್ನುಳಿದ 6 ರನ್ ಇತರೆ ರೂಪದಲ್ಲಿ ದೊರೆಯಿತು, 10. 2 ಓವರ್ ಗಳಲ್ಲಿ 10 ರನ್ ಗಳಿಗೆ ಪತನ ಕಂಡಿತು. ನ್ಯೂ ಸೌತ್ ವೇಲ್ಸ್ ವೇಗಿ ರೋಕ್ಸಾನ್ನೆ ನಾನ್ 2 ಓವರ್ ಗಳಲ್ಲಿ 1 ರನ್ ಗೆ 5 ವಿಕೆಟ್ ಕಿತ್ತರು.
ದಕ್ಷಿಣ ಆಸ್ಟ್ರೇಲಿಯಾದ 6 ಆಟಗಾರ್ತಿಯರು ಕ್ಲೀನ್ ಬೋಲ್ಡ್ ಆಗಿದ್ದರೆ, ಇಬ್ಬರು ಎಲ್ ಬಿ ಡಬ್ಲ್ಯೂ ಆಗಿದ್ದಾರೆ.
Advertisement