ವರ್ಷದ ಏಕದಿನ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕ, ಆಯ್ಕೆ ಮಾಡಿದ್ದು ಆಸ್ಟ್ರೇಲಿಯಾ!

ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ಅಬ್ಬರ ಮುಂದುವರೆದಿರುವಂತೆಯೇ ನಾಯಕ ವಿರಾಟ್ ಕೊಹ್ಲಿ ನಾಯಕತ್ವ ಮತ್ತು ಅವರ ಅಧ್ಭುತ ಪ್ರದರ್ಶನಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಸಂಸ್ಥೆ ಕೊಹ್ಲಿಯನ್ನು ತನ್ನ ವರ್ಷದ ಏಕದಿನ ಕ್ರಿಕೆಟ್ ತಂಡಕ್ಕೆ ನಾಯಕನಾಗಿ ಆಯ್ಕೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ಅಬ್ಬರ ಮುಂದುವರೆದಿರುವಂತೆಯೇ ನಾಯಕ ವಿರಾಟ್ ಕೊಹ್ಲಿ ನಾಯಕತ್ವ ಮತ್ತು ಅವರ ಅದ್ಭುತ  ಪ್ರದರ್ಶನಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಸಂಸ್ಥೆ ಕೊಹ್ಲಿಯನ್ನು ತನ್ನ ವರ್ಷದ ಏಕದಿನ ಕ್ರಿಕೆಟ್ ತಂಡಕ್ಕೆ ನಾಯಕನಾಗಿ ಆಯ್ಕೆ ಮಾಡಿದೆ.
ಹೌದು.. ವರ್ಷಾಂತ್ಯದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಸಂಸ್ಥೆ ತನ್ನ ಕನಸಿನ ವರ್ಷದ ಏಕದಿನ ತಂಡವನ್ನು ಆಯ್ಕೆ ಮಾಡಿದ್ದು ಈ ತಂಡಕ್ಕೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ಅಂತೆಯೇ ಕ್ರಿಕೆಟ್ ಆಸ್ಟ್ರೇಲಿಯಾ ತಂಡ ಬಿಡುಗಡೆ ಮಾಡಿರುವ ವರ್ಷದ ಏಕದಿನ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿಯೂ ಸೇರಿದಂತೆ ಒಟ್ಟು ನಾಲ್ಕು ಮಂದಿ ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ.
ಆರಂಭಿಕರಾಗಿ ರೋಹಿತ್ ಶರ್ಮಾ (ಭಾರತ), ಬೇರ್ ಸ್ಚೋವ್ (ಇಂಗ್ಲೆಂಡ್), 2ನೇ ಕ್ರಮಾಂಕದಲ್ಲಿ ಜೋ ರೂಟ್ (ಇಂಗ್ಲೆಂಡ್), ಮಧ್ಯಮ ಕ್ರಮಾಂಕದಲ್ಲಿ  ನಾಯಕ ವಿರಾಟ್ ಕೊಹ್ಲಿ (ಭಾರತ), ಶಿಮ್ರಾನ್ ಹೇಟ್ಮೇರ್ (ವೆಸ್ಟ್ ಇಂಡೀಸ್), ಜೋಸ್ ಬಟ್ಲರ್ (ಇಂಗ್ಲೆಂಡ್) (ವಿಕೆಟ್ ಕೀಪರ್), ಕೆಳ ಕ್ರಮಾಂಕದಲ್ಲಿ ತೀಸ್ರಾ ಪರೇರಾ (ಶ್ರೀಲಂಕಾ), ರಷೀದ್ ಖಾನ್ (ಆಫ್ಘಾನಿಸ್ತಾನ) ಕುಲದೀಪ್ ಯಾದವ್ (ಭಾರತ), ಮುಸ್ತಫಿಜುರ್ ರೆಹಮಾನ್ (ಬಾಂಗ್ಲಾದೇಶ) ಅಂತಿಮವಾಗಿ ಜಸ್ ಪ್ರೀತ್ ಬುಮ್ರಾ (ಭಾರತ) ಸ್ಥಾನ ಪಡೆದಿದ್ದಾರೆ.
2018ನೇ ಸಾಲಿನಲ್ಲಿ ವಿರಾಟ್ ಕೊಹ್ಲಿ ವಿರಾಟ್ ಕೊಹ್ಲಿ 14 ಏಕದಿನ ಪಂದ್ಯಗಳನ್ನಾಡಿದ್ದು  133.55 ಸರಾಸರಿಯಲ್ಲಿ 1200 ರನ್ ಗಳನ್ನು ಕಲೆಹಾಕಿದ್ದಾರೆ. ಈ ಪೈಕಿ 6 ಶತಕ ಮತ್ತು ಮೂರು ಅರ್ಧಶತಕಗಳೂ ಸೇರಿವೆ. ಅಂತೆಯೇ ಕಳೆದ ವರ್ಷ ಕೊಹ್ಲಿ ವೈಯುಕ್ತಿಕ ಗರಿಷ್ಠ ರನ್ 160 ರನ್ ಗಳಾಗಿತ್ತು.
ಇನ್ನು 2019ರಲ್ಲಿ ಭಾರತ ತಂಡದ ಏಕದಿನ ಅಭಿಯಾನ ಜನವರಿ 12ರಿಂದ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com