ಸರ್ಫರಾಜ್ ಖಾನ್ ಸಹೋದರನಿಗೆ ಅಮಾನತು ಶಿಕ್ಷೆ, 3 ವರ್ಷ ಬ್ಯಾಟ್ ಮುಟ್ಟುವಂತಿಲ್ಲ!

ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಸರ್ಫರಾಜ್ ಖಾನ್ ಸಹೋದರನಿಗೆ ಬರೋಬ್ಬರಿ 3 ವರ್ಷಗಳ ಕಾಲ ನಿಷೇಧ ಹೇರುವ ಮೂಲಕ ಮುಂಬೈ ಕ್ರಿಕೆಟ್...
ಮುಶೀರ್ ಖಾನ್
ಮುಶೀರ್ ಖಾನ್
ಮುಂಬೈ: ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಸರ್ಫರಾಜ್ ಖಾನ್ ಸಹೋದರನಿಗೆ ಬರೋಬ್ಬರಿ 3 ವರ್ಷಗಳ ಕಾಲ ನಿಷೇಧ ಹೇರುವ ಮೂಲಕ ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ) ಇದೇ ಮೊದಲ ಬಾರಿಗೆ ಅತ್ಯಂತ ಕಠಿಣ ನಿರ್ಧಾರ ಕೈಗೊಂಡಿದೆ. 
ಮುಂಬೈ ಅಂಡರ್-16 ತಂಡದ ನಾಯಕ ಮುಶೀರ್ ಖಾನ್ ಗೆ ಎಂಸಿಎ ಮೂರು ವರ್ಷಗಳ ಕಾಲ ನಿಷೇಧ ಶಿಕ್ಷೆ ನೀಡಿದ್ದು 2022ರವರೆಗೆ ಮುಶೀರ್ ಮುಂಬೈನ ಯಾವುದೇ ತಂಡದಲ್ಲಿ ಆಡುವಂತಿಲ್ಲ. ಇಷ್ಟೇ ಅಲ್ಲ ಇದು ಅನುಚಿತ ವರ್ತನೆ ತೋರಿ ಎಲ್ಲಾ ಕ್ರಿಕೆಟಿಗರಿಗೂ ಎಚ್ಚರಿಕೆ ಗಂಯೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ ಹೇಳಿದೆ. 
ಸ್ಪಿನ್ ಮತ್ತು ಬ್ಯಾಟಿಂಗ್ ಕೌಶಲ್ಯದ ಮೂಲಕ 8ನೇ ವಯಸ್ಸಿನಲ್ಲೇ ಮುಶೀರ್ ಕ್ರಿಕೆಟ್ ನ ವಂಡರ್ ಕಿಡ್ ಎಂದು ಕರೆಸಿಕೊಂಡಿದ್ದನು. 2013ರಲ್ಲಿ ಮುಂಬೈ ಕ್ರಿಕೆಟ್ ಅಸೋಶಿಯೇಷನ್ ಆಯೋಜಿಸಿದ್ದ ಸಮಾರಂಭದಲ್ಲಿ ಮುಶೀರ್ ಸಾಧನೆಗೆ ಖುದ್ದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪ್ರಶಸ್ತಿ ನೀಡಿ. ಶಹಬ್ಬಾಸ್ ಗಿರಿ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com