ನಾವು ಮಿತಿಮೀರಿ ಮಾತಾಡಿದ್ದೇವೆ, ತಪ್ಪಿನ ಮನವರಿಕೆಯಾಗಿದೆ, ಕ್ಷಮೆ ಯಾಚಿಸುತ್ತೇನೆ: ಕರಣ್ ಜೋಹರ್

ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ನಾವು ಮಿತಿಮೀರಿ ಮಾತನಾಡಿದ್ದೇವೆ, ತಪ್ಪಿನ ಮನವರಿಕೆಯಾಗಿದ್ದು, ಕ್ಷಮೆ ಯಾಚಿಸುತ್ತೇನೆ ಎಂದು ಬಾಲಿವುಡ್ ನಿರ್ದೇಶಕ ಹಾಗೂ ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ನಾವು ಮಿತಿಮೀರಿ ಮಾತನಾಡಿದ್ದೇವೆ, ತಪ್ಪಿನ ಮನವರಿಕೆಯಾಗಿದ್ದು, ಕ್ಷಮೆ ಯಾಚಿಸುತ್ತೇನೆ ಎಂದು ಬಾಲಿವುಡ್ ನಿರ್ದೇಶಕ ಹಾಗೂ ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್ ಹೇಳಿದ್ದಾರೆ.
ಖಾಸಗಿ ವಾಹಿನಿಯ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯಾ-ಕೆಎಲ್ ರಾಹುಲ್ ರಿಂದ ಅಸಭ್ಯ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ 2ನೇ ಬಾರಿಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಕರಣ್ ಜೋಹರ್, ವಿವಾದದಲ್ಲಿ ಸಿಲುಕಿರುವ ಕ್ರಿಕೆಟಿಗರಾದ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯಗೆ ಕ್ಷಮೆಯಾಚಿಸಿದ್ದಾರೆ. ಅಲ್ಲದೆ ಸಂಭಾಷಣೆ ವೇಳೆ ಮಹಿಳಾ ಅವಹೇಳನಕಾರಿ ಮಾತುಗಳ ಮೂಲಕ ಮಿತಿ ಮೀರಿದ್ದಕ್ಕೂ ಕ್ಷಮೆಯಾಚಿಸುತ್ತಿದ್ದೇನೆ ಎಂದು ಕರಣ್ ಹೇಳಿದ್ದಾರೆ. 
ಖಾಸಗಿ ಸುದ್ದಿಮಾಧ್ಯಮದೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ಅವರು, 'ಈ ಪ್ರಮಾದವನ್ನು ಹೇಗೆ ಸರಿಪಡಿಸುವುದು ಎಂದು ಹಲವು ಬಾರಿ ನಿದ್ದೆಗೆಟ್ಟು ಯೋಚಿಸಿದ್ದೇನೆ. ಎಪಿಸೋಡ್ ನಲ್ಲಿ ನಡೆದ ಸಂಭಾಷಣೆಯನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ ನಡೆದ ಘಟನೆಗಳು ನಾವು ಮಿತಿಮೀರಿ ಮಾತನಾಡಿದ್ದೇವೆ ಎಂಬುದನ್ನು ಮನವರಿಕೆ ಮಾಡುತ್ತವೆ. ಅದು ನನ್ನ ವೇದಿಕೆಯಲ್ಲಿಯೇ ನಡೆದಿರುವುದರಿಂದ ಕ್ಷಮೆ ಕೇಳುವುದಾಗಿ' ಕರಣ್ ಹೇಳಿದ್ದಾರೆ.
ಕಾಫಿ ವಿತ್ ಕರುಣ್ ಕಾರ್ಯಕ್ರಮದಲ್ಲಿ ಸೆಕ್ಸಿ ಕಾಮೆಂಟ್ ಮಾಡುವ ಮೂಲಕ ಬಿಸಿಸಿಐ ಅವಕೃಪೆಗೆ ಗುರಿಯಾಗಿರುವ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್ ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರ್’ಗಳ ಸರಣಿಯಿಂದ ಹೊರದಬ್ಬಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com