ತಿಸಾರ ಪೆರೆರಾರನ್ನು ಲಸಿತ್ ಮಲಿಂಗಾ ಪತ್ನಿ ತಾನ್ಯಾ ಟಾರ್ಗೆಟ್ ಮಾಡಿದ್ದೇಕೆ?

ಲಂಕಾ ತಂಡದ ವೇಗ ಬೌಲರ್ ಲಸಿತ್ ಮಲಿಂಗಾ ಪತ್ನಿ ತಾನ್ಯಾ ಹಾಗೂ ತಿಸಾರ ಪೆರೆರಾರ ನಡುವಿನ ಸಾಮಾಜಿಕ ಜಾಲತಾಣದ ಕದನ ತಾರಕಕ್ಕೇರಿದ್ದು ಸದ್ಯ...
ಲಸಿತ್ ಮಲಿಂಗಾ-ತಿಸಾರ ಪೆರೆರಾ-ತಾನ್ಯಾ
ಲಸಿತ್ ಮಲಿಂಗಾ-ತಿಸಾರ ಪೆರೆರಾ-ತಾನ್ಯಾ
Updated on
ಕೊಲಂಬೊ: ಲಂಕಾ ತಂಡದ ವೇಗ ಬೌಲರ್ ಲಸಿತ್ ಮಲಿಂಗಾ ಪತ್ನಿ ತಾನ್ಯಾ ಹಾಗೂ ತಿಸಾರ ಪೆರೆರಾರ ನಡುವಿನ ಸಾಮಾಜಿಕ ಜಾಲತಾಣದ ಕದನ ತಾರಕಕ್ಕೇರಿದ್ದು ಸದ್ಯ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವಂತೆ ಪೆರೆರಾ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. 
ತಾನ್ಯಾ ಕಳೆದ ಕೆಲ ದಿನಗಳ ಹಿಂದೆ ಫೇಸ್ ಬುಕ್ ಖಾತೆಯಲ್ಲಿ ತಿಸಾರರನ್ನು ಟಾರ್ಗೆಟ್ ಮಾಡಿ ಪೋಸ್ಟ್ ಪ್ರಕಟಿಸಿದ್ದರು. ಇದರಲ್ಲಿ ತಿಸಾರ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಶ್ರೀಲಂಕಾದ ಕ್ರೀಡಾ ಸಚಿವರನ್ನು ಭೇಟಿಯಾಗಿದ್ದರು ಎಂದು ಬರೆದುಕೊಂಡಿದ್ದರು.
ತಾನ್ಯಾರ ಈ ಪೋಸ್ಟ್ ಗೆ ತಿರುಗೇಟು ನೀಡಿದ್ದ ತಿಸಾರ ಅವರು, ಕ್ಯಾಲೆಂಡರ್ ವರ್ಷದಲ್ಲಿ ತಾವು ಮಾಡಿದ ಸಾಧನೆಗಳು ಪಟ್ಟಿ ಮಾಡಿ ತಂಡದಲ್ಲಿ ಸ್ಥಾನ ಪಡೆಯಲು ತಮ್ಮ ಉತ್ತಮ ಪ್ರದರ್ಶನವೇ ಕಾರಣ ಎಂದು ಟಾಂಗ್ ನೀಡಿದ್ದರು. ಇದಕ್ಕೆ ತಾನ್ಯಾ ತಿಸಾರರನ್ನು ಮತ್ತೆ ಟಾರ್ಗೆಟ್ ಮಾಡಿ ಮತ್ತೊಂದು ಪೋಸ್ಟ್ ಮಾಡಿದ್ದರು. 
ಇದಕ್ಕೆ ಫುಲ್ ಸ್ಟಾಪ್ ಆಗಲು ಮುಂದಾಗಿರುವ ಪೆರೆರಾ ಶ್ರೀಲಂಕಾ ಕ್ರಿಕೆಟ್ ಬೋರ್ಡಿನ ಸಿಇಒ ಆಶ್ಲೇ ಡಿ ಸಿಲ್ವಾ ಅವರಿಗೆ ಪತ್ರ ಬರೆದಿದ್ದಾರೆ. ಕೆಲವರ ವೈಯಕ್ತಿಕ ದ್ವೇಷಕ್ಕೆ ತಂಡದ ಸಾಮರಸ್ಯ ಹಾಳಾಗುತ್ತಿದೆ. ಕೂಡಲೇ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com