ಕಳಪೆ ಪ್ರದರ್ಶನ: ವಿಶ್ವಕಪ್ ನಂತರ ಧೋನಿ ನಿವೃತ್ತಿ?

ಟೀಂ ಇಂಡಿಯಾ ಆಡಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕೊನೆಯ ಪಂದ್ಯವು ಮಹೇಂದ್ರ ಸಿಂಗ್ ಧೋನಿ ಪಾಲಿಗೆ ವಿದಾಯದ ಪಂದ್ಯವಾಗಲಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.
ಧೋನಿ
ಧೋನಿ
ಲಂಡನ್ :  ಟೀಂ ಇಂಡಿಯಾ ಆಡಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕೊನೆಯ ಪಂದ್ಯವು ಮಹೇಂದ್ರ ಸಿಂಗ್ ಧೋನಿ ಪಾಲಿಗೆ ವಿದಾಯದ ಪಂದ್ಯವಾಗಲಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.
ಒಂದು ವೇಳೆ ಭಾರತ ಫೈನಲ್ಸ್ ಪಂದ್ಯಕ್ಕೆ ಆರ್ಹತೆ ಪಡೆದರೆ ಜುಲೈ 14 ರಂದು ಲಾರ್ಡ್ಸ್  ಮೈದಾನದಲ್ಲಿ ನಡೆಯಲಿರುವ ಪಂದ್ಯವು ಭಾರತೀಯ ಕ್ರಿಕೆಟಿನ ಲೆಜೆಂಡ್ ಧೋನಿ ಅವರ ವಿದಾಯದ ಪಂದ್ಯವಾಗಲಿದೆ. 
ವಿಶ್ವಕಪ್ ಕ್ರಿಕೆಟ್ ನಂತರ ಧೋನಿ ಟೀಂ ಇಂಡಿಯಾದಲ್ಲಿ ಮುಂದುವರೆಯುವ ಸಾಧ್ಯತೆ ಇಲ್ಲ ಆದರೆ,  ಮೂರು ಮಾದರಿಯ ಕ್ರಿಕೆಟಿನ ನಾಯಕತ್ವಕ್ಕೆ ದಿಢೀರನೇ ನಿವೃತ್ತಿ ಘೋಷಿಸಿದ್ದನ್ನೂ ಯಾರು ಕೂಡಾ ಉಹಿಸಿರಲಿಲ್ಲ ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
ಪ್ರಸ್ತುತ ಇರುವ ಆಯ್ಕೆದಾರರ ಸಮಿತಿ ಆಕ್ಟೋಬರ್ ವರೆಗೂ ಇರುವ ಸಾಧ್ಯತೆ ಇದೆ. ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ನಡೆಯಲಿರುವ ಐಸಿಸಿ ವಿಶ್ವಕಪ್ ಟಿ-20 ಟೂನಿರ್ಯ ನಂತರ ಆಯ್ಕೆದಾರ ಸಮಿತಿ ಕೂಡಾ ಬದಲಾವಣೆಯಾಗಲಿದೆ. ನೂತನ ಸಮಿತಿ ಅಧಿಕಾರಕ್ಕೆ ಬಂದ ನಂತರ ಟಿ-20 ಹಾಗೂ ಏಕದಿನ ಪಂದ್ಯದ ಆಟಗಾರರಲ್ಲೂ ಬದಲಾವಣೆ ಆಗುವ ಸಾಧ್ಯತೆ ಇದೆ. 
ಆದಾಗ್ಯೂ, ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ಸೆಮಿ ಫೈನಲ್ ಪ್ರವೇಶದೊಂದಿಗೆ ಬಿಸಿಸಿಐ ಅಥವಾ ಟೀಂ ಮ್ಯಾನೇಜ್ ಮೆಂಟ್ ಸೂಕ್ಷ್ಮ ವಿಚಾರಗಳ ಬಗ್ಗೆ ಮಾತುಕತೆ ನಡೆಸುತ್ತಿದೆ.   ಧೋನಿ ಏಳು ಪಂದ್ಯಗಳಿಂದ 223 ರನ್ ಗಳಿಸಿದ್ದಾರೆ. ಇದನ್ನು ಪರಿಗಣಿಸಿದರೆ ಅವರ ಅಸಮರ್ಥತೆ ಪರಿಣಾಮ ಬೀರುವ ಸಾಧ್ಯತೆ ಇದೆ. 
ಆದರೆ, ಕ್ಷೇತ್ರ ರಕ್ಷಣೆಯಲ್ಲಿ ಧೋನಿ ಅವರ ಕೊಡುಗೆ ಈಗಲೂ ತೀವ್ರತೆಯಿಂದ ಕೂಡಿದೆ. ಮಾಧ್ಯಮದ ಮುಂದೆ ಮಾತನಾಡುವ ಯಾವುದೇ ಆಟಗಾರರು ಧೋನಿ ಅವರ ಕ್ಷೇತ್ರ ರಕ್ಷಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. 
2017ರ ಚಾಂಫಿಯನ್ ಟ್ರೋಫಿ ನಂತರ ಟೀಂ ಮ್ಯಾನೇಜ್ ಮೆಂಟ್ ಧೋನಿ ಅವರನ್ನು 2019ರ ವಿಶ್ವಕಪ್ ವರೆಗೂ ಮುಂದುವರೆಸುವ ಬಗ್ಗೆ ತೀರ್ಮಾನ ಕೈಗೊಂಡಿತ್ತು. ಧೋನಿ ಅವರ ಕಳಪೆ ಪ್ರದರ್ಶನದ ನಡುವೆಯೂ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿದ್ದು, ಅವರನ್ನು ಎಚ್ಚರಿಕೆಯಿಂದ ರಕ್ಷಿಸಲಾಗಿದೆ ಎಂದು ಮಾಜಿ ಆಟಗಾರರೊಬ್ಬರು ಹೇಳಿದ್ದಾರೆ. 
ಯಾರು ಕೂಡಾ ನಿವೃತ್ತಿಯಾಗಲಿ ಎಂದು ಹೇಳುತ್ತಿಲ್ಲ. ಆದರೆ, ವಿಶ್ವಕಪ್ ನಂತರ ಅವರು ನಿವೃತ್ತಿಯಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com