ಐಸಿಸಿ ವಿಶ್ವಕಪ್ 2019: ನಿವೃತ್ತಿ ಬೆನ್ನಲ್ಲೇ ಶೊಯೆಬ್ ಮಲ್ಲಿಕ್ ಹೇಳಿದ್ದೇನು?

ಪ್ರಮುಖ ಆಟಗಾರ ಶೊಯೆಬ್ ಮಲ್ಲಿಕ್ ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದು, ಕೆಲ ವರ್ಷಗಳ ಹಿಂದೆಯೇ ವಿಶ್ವಕಪ್ ಟೂರ್ನಿ ಬಳಿಕ ನಿವೃತ್ತಿಯಾಗಲು ನಿರ್ಧರಿಸಿದ್ದೆ ಎಂದು ಮಲ್ಲಿಕ್ ಹೇಳಿದ್ದಾರೆ.
ಶೊಯೆಬ್ ಮಲ್ಲಿಕ್
ಶೊಯೆಬ್ ಮಲ್ಲಿಕ್
ಲಂಡನ್: ಐಸಿಸಿ ವಿಶ್ವಕಪ್ 2019ರ ಟೂರ್ನಿಯಿಂದ ಪಾಕಿಸ್ತಾನ ಹೊರಬಿದ್ದ ಬೆನ್ನಲ್ಲೇ ಆ ತಂಡದ ಪ್ರಮುಖ ಆಟಗಾರ ಶೊಯೆಬ್ ಮಲ್ಲಿಕ್ ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದು, ಕೆಲ ವರ್ಷಗಳ ಹಿಂದೆಯೇ ವಿಶ್ವಕಪ್ ಟೂರ್ನಿ ಬಳಿಕ ನಿವೃತ್ತಿಯಾಗಲು ನಿರ್ಧರಿಸಿದ್ದೆ ಎಂದು ಮಲ್ಲಿಕ್ ಹೇಳಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಶೊಯೆಬ್ ಮಲ್ಲಿಕ್, ಇಂದು ನಾನು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳುತ್ತಿದ್ದೇನೆ. ನನ್ನ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ನನಗೆ ನೆರವಾದ ಎಲ್ಲರಿಗೂ ಈ ಮೂಲಕ ಧನ್ಯವಾದ ಹೇಳುತ್ತೇನೆ. ನನ್ನ ಜೊತೆ ಆಡಿದ ಎಲ್ಲ ಕ್ರಿಕೆಟಿಗರಿಗೆ, ನಾಯಕರಿಗೆ ಮತ್ತು ನನ್ನ ಕೋಚ್ ಗಳಿಗೆ ಧನ್ಯವಾದ ಹೇಳುತ್ತೇನೆ. ಅಂತೆಯೇ ನನ್ನ ಕುಟುಂಬ, ಸ್ನೇಹಿತರು, ಮಾಧ್ಯಮಗಳು, ಆಯೋಜಕರಿಗೂ ಧನ್ಯವಾದ ಹೇಳುತ್ತೇನೆ. ಮುಖ್ಯವಾಗಿ ನನ್ನ ಅಭಿಮಾನಿಗಳಿಗೆ ನಾನು ಧನ್ಯಾವಾದ ಹೇಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಪಂದ್ಯ ಮುಕ್ತಾಯದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶೊಯೆಬ್ ಮಲ್ಲಿಕ್, ಈ ಹಿಂದೆಯೇ ನಾನು ಸಾಕಷ್ಟು ಸಂದರ್ಶನಗಳಲ್ಲಿ ಹೇಳಿದ್ದೆ. ವಿಶ್ವಕಪ್ ಟೂರ್ನಿ ಬಳಿಕ ವಿದಾಯ ಹೇಳಲು ನಿರ್ಧರಿಸಿದ್ದೆ. ಕೆಲ ವರ್ಷಗಳ ಹಿಂದೆಯೇ ವಿಶ್ವಕಪ್ ಟೂರ್ನಿ ಬಳಿಕ ನಿವೃತ್ತಿಯಾಗಲು ನಿರ್ಧರಿಸಿದ್ದೆ. ಅದರಂತೆ ಏಕದಿನ ಕ್ರಿಕೆಟ್ ನಲ್ಲಿ ಇಂದು ನನ್ನ ಅಂತಿಮ ಪಂದ್ಯವಾಗಿದ್ದು, ನಾನು ಏಕದಿನ ಕ್ರಿಕೆಟ್ ನಿಂದ ನಿವೃತ್ತಿಯಾಗುತ್ತಿದ್ದೇನೆ. ಈಗ ನನ್ನ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಇಚ್ಛಿಸುತ್ತೇನೆ. ಅಂತೆಯೇ ಟಿ20 ಕ್ರಿಕೆಟ್ ನ ಮೇಲೆ ಹೆಚ್ಚು ಗಮನ ಹರಿಸಲು ಇದು ನೆರವಾಗುತ್ತದೆ. ಅಭ್ಯಾಸಕ್ಕೆ ಹೆಚ್ಚು ಸಮಯ ಸಿಕ್ಕಂತಾಗುತ್ತದೆ ಎಂದು ಮಲ್ಲಿಕ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com