ವಿಶ್ವಕಪ್ ಸೋಲಿನ ಬೆನ್ನಲ್ಲೇ ಏಕದಿನ ಕ್ರಿಕೆಟ್ ಗೆ ಶೊಯೆಬ್ ಮಲ್ಲಿಕ್ ವಿದಾಯ

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಬಾಂಗ್ಲಾದೇಶದ ವಿರುದ್ದದ ಅಂತಿಮ ಪಂದ್ಯವನ್ನಾಡಿದ ಬೆನ್ನಲ್ಲೇ ಪಾಕಿಸ್ತಾನದ ಹಿರಿಯ ಆಟಗಾರ ಶೊಯೆಬ್ ಮಲ್ಲಿಕ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಣೆ ಮಾಡಿದ್ದಾರೆ.
ಶೊಯೆಬ್ ಮಲ್ಲಿಕ್ ವಿದಾಯ
ಶೊಯೆಬ್ ಮಲ್ಲಿಕ್ ವಿದಾಯ
Updated on
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಬಾಂಗ್ಲಾದೇಶದ ವಿರುದ್ದದ ಅಂತಿಮ ಪಂದ್ಯವನ್ನಾಡಿದ ಬೆನ್ನಲ್ಲೇ ಪಾಕಿಸ್ತಾನದ ಹಿರಿಯ ಆಟಗಾರ ಶೊಯೆಬ್ ಮಲ್ಲಿಕ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಣೆ ಮಾಡಿದ್ದಾರೆ.
ಇಂದು ಲಾರ್ಡ್ಸ್ ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಅಂತಿಮ ಲೀಗ್ ಪಂದ್ಯದ ಗೆಲುವಿನ ಬೆನ್ನಲ್ಲೇ ಶೊಯೆಬ್ ಮಲ್ಲಿಕ್ ಏಕದಿನ ಕ್ರಿಕೆಟ್ ವಿದಾಯ ಘೋಷಣೆ ಮಾಡಿದ್ದಾರೆ. ಒಂದು ಕಾಲದಲ್ಲಿ ಪಾಕಿಸ್ತಾನ ಬ್ಯಾಟಿಂಗ್ ನ ಆಧಾರ ಸ್ಥಂಭವಾಗಿದ್ದ ಶೊಯೆಬ್ ಮಲ್ಲಿಕ್ ಇದೀಗ ತಮ್ಮ ಏಕದಿನ ಕ್ರಿಕೆಟ್ ಅಭಿಯಾನಕ್ಕೆ ವಿದಾಯ ಹೇಳಿದ್ದು, ಟಿ20 ಮತ್ತು ಟೆಸ್ಟ್ ಕ್ರಿಕೆಟ್ ಪಾಕ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಒಟ್ಟು 287 ಏಕದಿನ ಪಂದ್ಯವನ್ನಾಡಿರುವ ಶೊಯೆಬ್ ಮಲ್ಲಿಕ್ 34.56 ಸರಾಸರಿಯಲ್ಲಿ 7534 ರನ್ ಗಳಿಸಿದ್ದಾರೆ. ಈ ಪೈಕಿ 9 ಶತಕ, 44 ಅರ್ಧಶತಕಗಳು ಸೇರಿವೆ. 2004ರಲ್ಲಿ ಶ್ರೀಲಂಕಾದಲ್ಲಿ ನಡೆದ ಏಷ್ಯಾಕಪ್ ಟೂರ್ನಿಯ ಭಾರತದ ವಿರುದ್ಧದ ಪಂದ್ಯದಲ್ಲಿ ಮಲ್ಲಿಕ್ 143 ರನ್ ಸಿಡಿಸಿದ್ದರು. ಇದು ಅವರ ವೃತ್ತಿ ಜೀವನದ ಶ್ರೇಷ್ಠ ಬ್ಯಾಟಿಂಗ್ ಸಾಧನೆಯಾಗಿದೆ. ಅಂತೆಯೇ ಬೌಲಿಂಗ್ ನಲ್ಲೂ ಗಮನಾರ್ಹ ಪ್ರದರ್ಶನ ನೀಡಿರುವ ಶೊಯೆಬ್ ಮಲ್ಲಿಕ್, 158 ವಿಕೆಟ್ ಕಬಳಿಸಿದ್ದು, ಹಾಂಕಾಂಗ್ ವಿರುದ್ಧ 19 ರನ್ ನೀಡಿ 4 ವಿಕೆಟ್ ಕಬಳಿಸಿದ್ದು ಅವರ ಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ.
ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಮಿಶ್ರ ಪ್ರದರ್ಶನ ನೀಡಿರುವ ಪಾಕಿಸ್ತಾನ ಪಾಕ್ ಅಭಿಮಾನಿಗಳಿಂದ ವ್ಯಾಪಕ ಟೀಕೆಗೆ ತುತ್ತಾಗಿತ್ತು. ಪ್ರಮುಖವಾಗಿ ಭಾರತದ ವಿರುದ್ಧದ ಸೋಲು ಪಾಕಿಸ್ತಾನಕ್ಕೆ ನುಂಗಲಾಗರ ತುತ್ತಾಗಿ ಪರಿಣಮಿಸಿತ್ತು. ಅದರಲ್ಲೂ ಅಂದು ಶೊಯೆಬ್ ಮಲ್ಲಿಕ್ ಹೀನಾಯ ಪ್ರದರ್ಶನ ಅವರನ್ನು ವ್ಯಾಪಕ ಟ್ರೋಲ್ ಮಾಡುವಂತೆ ಮಾಡಿತ್ತು. ಕೇವಲ ಮಲ್ಲಿಕ್ ಮಾತ್ರವಲ್ಲದೇ ಅವರ ಪತ್ನಿ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾರನ್ನು ಟ್ವೀಟಿಗರು ಮತ್ತು ಪಾಕ್ ನಟಿ ವೀಣಾ ಮಲ್ಲಿಕ್ ವ್ಯಾಪಕವಾಗಿ ಟೀಕಿಸಿದ್ದರು. 
ಇದಕ್ಕೆ ತಿರುಗೇಟು ನೀಡಿದ್ದ ಶೊಯೆಬ್ ಮಲ್ಲಿಕ್ 'ಕ್ರೀಡೆಯನ್ನು ಕ್ರೀಡೆಯನ್ನಾಗಿ ನೋಡಿ, ಕುಟುಂಬವನ್ನು ಎಳೆದು ತರಬೇಡಿ ಎಂದು ಹೇಳಿದ್ದಾರೆ. 'ನಾನು ಕಳೆದ 20 ವರ್ಷಗಳಿಂದ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ವೈಯುಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ನಾನೇ ಸ್ಪಷ್ಟನೆ ನೀಡಬೇಕು. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದು ಜೂನ್ 13ರ ವಿಡಿಯೋ ಜೂನ್ 15ರ ವಿಡಿಯೋ ಅಲ್ಲ. ಅಂದರೆ ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ವಿಡಿಯೋವನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ.  ಎಲ್ಲ ಕ್ರಿಕೆಟಿಗರ ಪರವಾಗಿ ನಾನು ಕೇಳುತ್ತಿದ್ದೇನೆ. ಕನಿಷ್ಟ ಪಕ್ಷ ನಮ್ಮ ಕುಟುಂಬಗಳಿಗೆ ಗೌರವ ನೀಡಿ. ಕ್ಷುಲ್ಲಕ ವಿಚಾರದಲ್ಲಿ ನಮ್ಮ ಕುಟುಂಬಸ್ಖರನ್ನು ಎಳೆದು ತರಬೇಡಿ ಎಂದು ಮನವಿ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com