ಟೀಂ ಇಂಡಿಯಾ ಜೆರ್ಸಿಯಲ್ಲಿ ಬದಲಾಗಲಿದೆ ಹೆಸರು, ಒಪ್ಪೋ ಔಟ್, ಬೈಜೂಸ್ ಇನ್!

ಟೀಂ ಇಂಡಿಯಾದ ಜೆರ್ಸಿಯಲ್ಲಿದ್ದ ಚೀನಾ ಮೂಲದ ಮೊಬೈಲ್ ತಯಾರಕ ಸಂಸ್ಥೆ ಒಪ್ಪೋ ಬ್ರ್ಯಾಂಡ್ ಗೇಟ್ ಪಾಸ್ ನೀಡಿ ಬೈಜೂಸ್ ರಾರಾಜಿಸಲಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ
ಮುಂಬೈ: ಟೀಂ ಇಂಡಿಯಾದ ಜೆರ್ಸಿಯಲ್ಲಿದ್ದ ಚೀನಾ ಮೂಲದ ಮೊಬೈಲ್ ತಯಾರಕ ಸಂಸ್ಥೆ ಒಪ್ಪೋ ಬ್ರ್ಯಾಂಡ್ ಗೇಟ್ ಪಾಸ್ ನೀಡಿ ಬೈಜೂಸ್ ರಾರಾಜಿಸಲಿದೆ.
ಕೇರಳ ಮೂಲದ ಬೈಜು ರವೀಂದ್ರನ್ ಒಡೆತನದ ಬೈಜೂಸ್ ಹೆಸರು ಇನ್ನುಂದೆ ಟೀಂ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಲಿದೆ. 2017 ಮಾರ್ಚ್ ತಿಂಗಳಲ್ಲಿ ಐದು ವರ್ಷಗಳ ಅವಧಿಗೆ ಬರೋಬ್ಬರಿ 1079 ಕೋಟಿ ರುಪಾಯಿಗಳಿಗೆ ಒಪ್ಪೋ ಬಿಡ್ ಗೆದ್ದಿತ್ತು. 
ಆದರೆ ಇದೀಗ ಒಪ್ಪೋ ತನ್ನ ಬಿಡ್ ಹಕ್ಕನ್ನು ಶೈಕ್ಷಣಿಕ ತಂತ್ರಜ್ಞಾನ ಒನ್ಲೈನ್ ಟೂರಿಂಗ್ ಸಂಸ್ಥೆಯಾದ ಬೈಜೂಸ್ ಗೆ ಹಸ್ತಾಂತರಿಸಲು ನಿರ್ಧರಿಸಿದೆ. ಮುಂದಿನ ವೆಸ್ಟ್ ಇಂಡೀಸ್ ಸರಣಿಯಲ್ಲಿ ಒಪ್ಪೋ ಬ್ರ್ಯಾಂಡ್ ಮುಂದುವರೆಯಲಿದ್ದು ಸೆಪ್ಟೆಂಬರ್ ನಲ್ಲಿ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸದ ವೇಳೆ ಟೀಂ ಇಂಡಿಯಾ ಜೆರ್ಸಿಯಲ್ಲಿ ಬೈಜೂಸ್ ಲೊಗೊ ಕಂಡುಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com