ಐಸಿಸಿ ವಿಶ್ವಕಪ್ 2019: ಮುಂದುವರಿದ ಗಾಯದ ಸಮಸ್ಯೆ, ಟೂರ್ನಿಯಿಂದ ಮೊಹಮ್ಮದ್‌ ಶಹ್ಜಾದ್‌ ಔಟ್‌

ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಟಗಾರರ ಗಾಯದ ಸಮಸ್ಯೆ ಮುಂದುವರೆದಿದ್ದು, ದಕ್ಷಿಣ ಆಫ್ರಿಕಾದ ಪ್ರಮುಖ ವೇಗೆ ಡೇಲ್ ಸ್ಟೇಯ್ನ್ ಬಳಿಕ ಇದೀಗ ಮತ್ತೋರ್ವ ಆಟಗಾರ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದಲೇ ಹೊರ ಬಿದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್‌: ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಟಗಾರರ ಗಾಯದ ಸಮಸ್ಯೆ ಮುಂದುವರೆದಿದ್ದು, ದಕ್ಷಿಣ ಆಫ್ರಿಕಾದ ಪ್ರಮುಖ ವೇಗೆ ಡೇಲ್ ಸ್ಟೇಯ್ನ್ ಬಳಿಕ ಇದೀಗ ಮತ್ತೋರ್ವ ಆಟಗಾರ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದಲೇ ಹೊರ ಬಿದಿದ್ದಾರೆ.
ಹೌದು.. ಆಫ್ಘಾನಿಸ್ತಾನ ತಂಡದ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ಶೆಹ್ಜಾದ್‌ ಮೊಣಕಾಲು ಗಾಯದಿಂದ ಬಳಲುತ್ತಿದ್ದು, ನಿರೀಕ್ಷಿತ ಸಮಯದಲ್ಲಿ ಚೇತರಿಸಿಕೊಳ್ಳದ ಕಾರಣ ಅವರು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. 
ಶಹ್ಜಾದ್‌ ಅವರ ಸ್ಥಾನಕ್ಕೆ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಇಮ್ರಾನ್‌ ಅಲಿ ಖಿಲ್‌ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ಇದಕ್ಕೆ 2019ರ ಐಸಿಸಿ ವಿಶ್ವಕಪ್‌ ಟೂರ್ನಿಯ ತಾಂತ್ರಿಕ ಸಮಿತಿ ಒಪ್ಪಿಗೆ ಕೂಡ ಸೂಚಿಸಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಪಾಕಿಸ್ತಾನದ ವಿರುದ್ಧ ಐಸಿಸಿ ವಿಶ್ವಕಪ್‌ ಟೂರ್ನಿಯ ಮೊದಲ ಅಭ್ಯಾಸ ಪಂದ್ಯದಲ್ಲಿ ಮೊಹಮ್ಮದ್ ಶಹ್ಜಾದ್‌ ಗಾಯಗೊಂಡಿದ್ದರು. 24 ಎಸೆತಗಳಿಗೆ 22 ರನ್‌ ಗಳಿಸಿದ್ದ ವೇಳೆ ಅವರು 7ನೇ ಓವರ್‌ ನಲ್ಲಿ ಎಡ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡಿತ್ತು. ನಂತರ ಅವರು ಅಂಗಳದಿಂದ ಹೊರ ನಡೆದಿದ್ದರು. ಆ ಬಳಿಕ ಶೆಹ್ಜಾದ್ ಕ್ರೀಡಾಂಗಣಕ್ಕೆ ಇಳಿದಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com