ಕ್ರಿಕೆಟಿಗರೊಂದಿಗೆ ಕಾಣಿಸಿಕೊಂಡ ನಟ ರಣ್ ವೀರ್ ಸಿಂಗ್ ಗೆ WWE ಸ್ಟಾರ್ ಎಚ್ಚರಿಕೆ!

ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕ ಭಾರತೀಯ ಕ್ರಿಕೆಟಿಗರೊಂದಿಗೆ ಕಾಣಿಸಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದ ಖ್ಯಾತ ಬಾಲಿವುಡ್ ನಟ ರಣ್ ವೀರ್ ಸಿಂಗ್ ಗೆ ರೆಸ್ಲಿಂಗ್ ಸ್ಟಾರ್ ನಿಂದ ಹೊಸ ತಲೆನೋವು ಆರಂಭವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಲಂಡನ್: ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕ ಭಾರತೀಯ ಕ್ರಿಕೆಟಿಗರೊಂದಿಗೆ ಕಾಣಿಸಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದ ಖ್ಯಾತ ಬಾಲಿವುಡ್ ನಟ ರಣ್ ವೀರ್ ಸಿಂಗ್ ಗೆ ರೆಸ್ಲಿಂಗ್ ಸ್ಟಾರ್ ನಿಂದ ಹೊಸ ತಲೆನೋವು ಆರಂಭವಾಗಿದೆ.
ಹೌದು.. ಈ ಹಿಂದೆ ಮ್ಯಾಂಚೆಸ್ಟರ್ ನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಐಸಿಸಿ ವಿಶ್ವಕಪ್ ಪಂದ್ಯದ ಬಳಿಕ ಟೀಂ ಇಂಡಿಯಾ ಡಗೌಟ್ ನಲ್ಲಿ ಖ್ಯಾತ ಬಾಲಿವುಟ್ ನಟ ರಣ್ ವೀರ್ ಸಿಂಗ್ ಕಾಣಿಸಿಕೊಂಡಿದ್ದರು. ಅಷ್ಟು ಮಾತ್ರವಲ್ಲದೇ ಕ್ರಿಕೆಟಿಗರೊಂದಿಗೆ ಫೋಟೋ ಕೂಡ ಕ್ಲಿಕ್ಕಿಸಿಕೊಂಡು ಗೆಲುವಿನ ಸಂಭ್ರಮಾಚರಣೆ ಕೂಡ ಮಾಡಿದ್ದರು. ಆದರೆ ಈ ಸಂಭ್ರಮಾಚರಣೆಯೇ ರಣ್ ವೀರ್ ಸಿಂಗ್ ರನ್ನು ಪೇಚಿಗೆ ಸಿಲುಕವಂತೆ ಮಾಡಿದ್ದು, ಖ್ಯಾತ ರೆಸ್ಲಿಂಗ್ ಸ್ಟಾರ್ ಬ್ರಾಕ್ ಲೆಸ್ನರ್ ಅವರ ಮ್ಯಾನೇಜರ್ ಪಾಲ್ ಹೇಮನ್ ರಣ್ ವೀರ್ ಸಿಂಗ್ ಗೆ ಕಾನೂನು ಕ್ರಮ ಜರುಗಿಸುವ ಕುರಿತು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ರಣ್ ವೀರ್ ಸಿಂಗ್ ಗೆ ಟ್ವೀಟ್ ಮಾಡಿರುವ ಪಾಲ್ ಹೇಮನ್, ಕಾಪಿರೈಟ್ (ಕೃತಿಸ್ವಾಮ್ಯ)ಗೆ ಚ್ಯುತಿ ತಂದಿದ್ದೀರಿ ಎಂದು ಎಚ್ಚರಿಕೆ ನೀಡಿದ್ದಾರೆ..
ಯಾವ ಕಾರಣಕ್ಕೆ ಕಾನೂನು ಎಚ್ಚರಿಕೆ?
ಪಾಕ್ ವಿರುದ್ಧದ  ಪಂದ್ಯದ ಬಳಿಕ ಕ್ರಿಕೆಟಿಗರನ್ನು ಭೇಟಿ ಮಾಡಿದ್ದ ರಣ್ ವೀರ್ ಸಿಂಗ್ ಕೆಲ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದರು. ಹೀಗೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಗೆ ಅಪ್ಲೋಡ್ ಮಾಡಿ ಅದಕ್ಕೆ Eat. Sleep. Dominate. Repeat. The name is Hardik. Hardik Pandya. #unstoppable ಎಂದು ಟ್ವೀಟ್ ಮಾಡಿದ್ದರು. ಆದರೆ ಇದೇ ಟ್ವೀಟ್ ಗೆ ಸಂಬಂಧಿಸಿದಂತೆ ಪಾಲ್ ಹೇಮನ್ ರಣ್ ವೀರ್ ಸಿಂಗ್ ಅವರ ವಿರುದ್ಧ ಗರಂ ಆಗಿದ್ದಾರೆ. 
ಖ್ಯಾತ wwe ರೆಸ್ಲರ್ ಬ್ರಾಕ್ ಲೆಸ್ನರ್ ಗೆ ಸಂಬಂಧಿಸಿದಂತೆ ಪಾಲ್ ಹೇಮನ್, Eat Sleep CONQUER Repeat ಎಂಬ ಪದಗಳನ್ನು ವೇದಿಕೆ ಮೇಲೆ ಬಳಕೆ ಮಾಡುತ್ತಿರುತ್ತಾರೆ. ಇದೇ ಪದಗಳನ್ನು  ರಣ್ ವೀರ್ ಸಿಂಗ್ ತಿರುಚಿ ತಮ್ಮ ಟ್ವಿಟರ್ ನಲ್ಲಿ ಹಾಕಿದ್ದಾರೆ ಎಂದು ಪಾಲ್ ಹೀಮನ್ ಗರಂ ಆಗಿದ್ದಾರೆ. 
ಈ ಹಿಂದೆ ಧೋನಿ ವಿಚಾರವಾಗಿಯೂ ಟ್ವೀಚ್ ಮಾಡಿದ್ದ ಹೇಮನ್, ಧೋನಿ ಆಟಕ್ಕೆ ಫುಲ್ ಫಿದಾ ಆಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com