ಕ್ರೈಸ್ಟ್ ಚರ್ಚ್ ನಲ್ಲಿ ಗುಂಡಿನ ದಾಳಿ; ನ್ಯೂಜಿಲೆಂಡ್ ಪ್ರವಾಸ ರದ್ದುಗೊಳಿಸಿದ ಬಾಂಗ್ಲಾದೇಶ!

ನ್ಯೂಜಿಲೆಂಡ್ ನ ಹ್ಯಾಗ್ಲೆಯಲ್ಲಿನ ಮಸೀದಿ ಮೇಲಿನ ಭೀಕರ ಶೂಟಿಂಗ್ ದಾಳಿ ಬೆನ್ನಲ್ಲೇ ಬಾಂಗ್ಲಾದೇಶ ಕ್ರಿಕೆಟ್ ತಂಡ ನ್ಯೂಜಿಲೆಂಡ್ ಪ್ರವಾಸವನ್ನು ರದ್ದುಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನ ಹ್ಯಾಗ್ಲೆಯಲ್ಲಿನ ಮಸೀದಿ ಮೇಲಿನ ಭೀಕರ ಶೂಟಿಂಗ್ ದಾಳಿ ಬೆನ್ನಲ್ಲೇ ಬಾಂಗ್ಲಾದೇಶ ಕ್ರಿಕೆಟ್ ತಂಡ ನ್ಯೂಜಿಲೆಂಡ್ ಪ್ರವಾಸವನ್ನು ರದ್ದುಗೊಳಿಸಿದೆ.
ನ್ಯೂಜಿಲೆಂಡಿನ ಎರಡು ಕಡೆಗಳಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಈ ವರೆಗೂ ಸುಮಾರು 40 ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿ ಪ್ರಕರಣದ ಹಿನ್ನಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್‌ ತಂಡವು ತನ್ನ ನ್ಯೂಜಿಲೆಂಡ್ ಪ್ರವಾಸವನ್ನು ಮೊಟಕುಗೊಳಿಸಿ ತವರಿಗೆ ಮರಳಲು ಸಿದ್ಧವಾಗಿದೆ. 
ಪ್ರವಾಸಿ ಬಾಂಗ್ಲಾದೇಶ ಮತ್ತು ಆತಿಥೇಯ ನ್ಯೂಜಿಲೆಂಡ್ ನಡುವೆ ಮೂರನೇ ಟೆಸ್ಟ್‌ ಪಂದ್ಯವು ಶನಿವಾರದಂದು ಹೇಗ್ಲೀ ಓವಲ್‌ ಕ್ರೀಡಾಂಗಣದಲ್ಲಿ ಪ್ರಾರಭಗೊಳ್ಳಬೇಕಿತ್ತು. ಆದರೆ ಅದಕ್ಕೂ ಮೊದಲೇ ಈ ದಾಳಿ ಸಂಭವಿಸಿದೆ. ಇಂದು ಬಾಂಗ್ಲಾ ಕ್ರಿಕೆಟಿಗರು ದಾಳಿ ನಡೆದ ಇದೇ ಹೇಗ್ಲಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಬೇಕಿತ್ತು. ಆದರೆ ಕೂದಲೆಳೆ ಅಂತರದಲ್ಲಿ ಬಾಂಗ್ಲಾ ಕ್ರಿಕೆಟಿಗರು ಪ್ರಾಣಾಪಾಯದಿಂದ ಪಾರಾಗಿದ್ದರು. ಮಸೀದಿಯಲ್ಲಿ ಗುಂಡಿನ ಮೊರೆತ ಕೇಳುತ್ತಿದ್ದಂತೆಯೇ ಕ್ರಿಕೆಟಿಗರು ಅಲ್ಲಿದ ಓಡಿ ಹೋಗಿ ತಪ್ಪಿಸಿಕೊಂಡಿದ್ದರು.
ಬಾಂಗ್ಲಾ ಕ್ರಿಕೆಟಿಗ ಈ ಘಟನೆಯನ್ನು ಭೀಕರ ಎಂದು ಬಣ್ಣಿಸಿದ್ದರು. ಇನ್ನೋರ್ವ ಕ್ರಿಕೆಟಿಗ ಮುಷ್ಫೀಕರ್‌ ರಹೀಂ ಅವರು ಸರ್ವಶಕ್ತ ಅಲ್ಲಾಹುವಿನ ಕೃಪೆಯಿಂದ ನಾವಿವತ್ತು ಸುರಕ್ಷಿತವಾಗಿದ್ದೇವೆ ಎಂದು ಟ್ವೀಟ್‌ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com