ಆ್ಯಡಂ ಮಿಲ್ನೆ ಬದಲಿಗೆ ವಿಂಡೀಸ್ ನ ಯುವ ವೇಗಿ ಅಲ್ಜಾರಿ ಜೋಸೆಫ್ ಗೆ ಅವಕಾಶ ನೀಡಲಾಗಿದೆ. ವಿಂಡೀಸ್ ಪರ 9 ಟೆಸ್ಟ್ 16 ಏಕದಿನ ಪಂದ್ಯಗಳನ್ನು ಆಡಿರುವ ಜೋಸೆಫ್ 2016ರಲ್ಲಿ ತಂಡ ಅಂಡರ್-19 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೇ ಮೊದಲ ಬಾರಿಗೆ ಅವರು ಐಪಿಎಲ್ ತಂಡವೊಂದರಲ್ಲಿ ಸ್ಥಾನ ಪಡೆದಿದ್ದಾರೆ.