ಐಸಿಸಿ ಟಿ-20 ಶ್ರೇಯಾಂಕ: 5ನೇ ಸ್ಥಾನಕ್ಕಿಳಿದ ಭಾರತ

ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಶುಕ್ರವಾರ ಐಸಿಸಿ ಟಿ-20 ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತ(260) ಮೂರು ಸ್ಥಾನಗಳಲ್ಲಿ ಕುಸಿದು...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಶುಕ್ರವಾರ ಐಸಿಸಿ ಟಿ-20 ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತ(260) ಮೂರು ಸ್ಥಾನಗಳಲ್ಲಿ ಕುಸಿದು ಐದನೇ ಸ್ಥಾನ ಪಡೆದಿದೆ. ಟಿ-20 ವಿಶ್ವ ಚಾಂಪಿಯನ್‌ ಪಾಕಿಸ್ತಾನ 286 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ.
262 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದ್ದರೆ, 261 ಅಂಕಗಳೊಂದಿಗೆ ಇಂಗ್ಲೆಂಡ್‌ ಮೂರನೇ ಹಾಗೂ 261 ಅಂಕಗಳೊಂದಿಗೆ ಆಸ್ಟ್ರೇಲಿಯಾ ನಾಲ್ಕನೇ ಸ್ಥಾನದಲ್ಲಿದೆ.
ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡಗಳು 2 ಮತ್ತು 5ನೇ ಸ್ಥಾನಗಳನ್ನು ಬದಲಾಯಿಸಿಕೊಂಡಿವೆ. 2015-16ರ ಆವೃತ್ತಿ ಹೊರತು ಪಡಿಸಿ, ಇನ್ನುಳಿದಂತೆ 2016-17 ಹಾಗೂ 2017-18 ಆವೃತ್ತಿಯಲ್ಲಿ ಶೇ. 50 ರಷ್ಟು ಸಾಧನೆಯನ್ನು ಪರಿಗಣಿಸಿ ಟಿ-20 ವಾರ್ಷಿಕ ಪರಿಷ್ಕೃತ ತಂಡಗಳ ಶ್ರೇಯಾಂಕವನ್ನು ಬಿಡುಗಡೆ ಮಾಡಲಾಗಿದೆ.
ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಒಂದೊಂದು ಸ್ಥಾನಗಳಲ್ಲಿ ಏರಿಕೆ ಕಂಡಿರುವುದು ಗಣನೀಯ ಬದಲಾವಣೆ ಆಗಿದೆ. ಕ್ರಮವಾಗಿ ಇವೆರಡು 7 ಹಾಗೂ 8ನೇ ಸ್ಥಾನದಲ್ಲಿವೆ. ವೆಸ್ಟ್‌ ಇಂಡೀಸ್‌ 9ನೇ ಸ್ಥಾನಕ್ಕೆ ಜಾರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com