ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪರ ಕೇದಾರ್ ಜಾದವ್ ನಿರ್ಣಾಯಕ ಪಾತ್ರ!

ಲೋಕಸಭೆ ಚುನಾವಣೆ ಕಾವು ತಣ್ಣಗಾಗಿದ್ದು ಇನ್ನು ವಿಶ್ವಕಪ್ ಕಾವು ಜೋರಾಗಲಿದೆ. ಮೇ 30ರಿಂದ ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದ್ದು ಟೀಂ ಇಂಡಿಯಾಗೆ ಬಲಿಷ್ಠ ಬ್ಯಾಟ್ಸ್ ಮನ್ ಓರ್ವ ಸೇರಿ...
ಕೇದಾರ್ ಜಾದವ್
ಕೇದಾರ್ ಜಾದವ್
Updated on
ಮುಂಬೈ: ಲೋಕಸಭೆ ಚುನಾವಣೆ ಕಾವು ತಣ್ಣಗಾಗಿದ್ದು ಇನ್ನು ವಿಶ್ವಕಪ್ ಕಾವು ಜೋರಾಗಲಿದೆ. ಮೇ 30ರಿಂದ ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದ್ದು ಟೀಂ ಇಂಡಿಯಾಗೆ ಬಲಿಷ್ಠ ಬ್ಯಾಟ್ಸ್ ಮನ್ ಓರ್ವ ಸೇರಿ ಕೊಂಡಿದ್ದಾರೆ.
ಗಾಯಗೊಂಡಿದ್ದ ಕೇದಾರ್ ಜಾದವ್ ಇದೀಗ ಚೇತರಿಸಿಕೊಂಡಿದ್ದು ತಂಡವನ್ನು ಸೇರಿಕೊಂಡಿದ್ದಾರೆ. ಇನ್ನು ಕೇದಾರ್ ಜಾದವ್ ಬಗ್ಗೆ ಮಾತನಾಡಿರುವ ಮಾಜಿ ಸ್ಟಂಪರ್ ಚಂದ್ರಕಾಂತ್ ಪಂಡಿತ್ ಅವರು ವಿಶ್ವಕಪ್ ನಲ್ಲಿ ಕೇದಾರ್ ಜಾದವ್ ಟೀಂ ಇಂಡಿಯಾದಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ.
ಕೇದಾರ್ ಜಾದವ್ ಮಹಾರಾಷ್ಟ್ರದ ಅಂಡರ್-23ಯಲ್ಲಿದ್ದಾಗ ಕೋಚ್ ಆಗಿದ್ದ ಚಂದ್ರಕಾಂತ್ ಪಂಡಿತ್ ಅವರು ನಾನು ಕೇದಾರ್ ಬೆಳೆಯುತ್ತಿದ್ದ ವೇಳೆ ಅವರನ್ನು ಚನ್ನಾಗಿ ಬಲ್ಲೆ. ಸಮರ್ಥ ಆಟಗಾರ. ಎಂತಹದ್ದೆ ಒತ್ತಡ ಪರಿಸ್ಥಿತಿ ಇದ್ದರು ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com