ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪವನ್ ದೇಶ್‍ಪಾಂಡೆ ಸ್ಫೋಟಕ ಫಿಫ್ಟಿ: ಗೋವಾಗೆ 173 ರನ್ ಗುರಿ ನೀಡಿದ ಕರ್ನಾಟಕ

ಹೆರಂಬ್ ಪರಬ್ (24 ಕ್ಕೆ 5 ) ಐದು ವಿಕೆಟ್ ಗೊಂಚಲು ನಡುವೆಯೂ ಮಧ್ಯಮ ಕ್ರಮಾಂಕದ ಪವನ್ ದೇಶ್‍ಪಾಂಡೆ (63 ರನ್, 32 ಎಸೆತಗಳು) ಅವರ ಮೌಲ್ಯಯುತ ಅರ್ಧ ಶತಕದ ಬಲದಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಕೊನೆಯ ಲೀಗ್ ಪಂದ್ಯದಲ್ಲಿ ಗೋವಾ ತಂಡಕ್ಕೆ ಸ್ಪರ್ಧಾತ್ಮ ಗುರಿ ನೀಡಿದೆ.
Published on

ವಿಜಯಶಂಕರಂ: ಹೆರಂಬ್ ಪರಬ್ (24 ಕ್ಕೆ 5 ) ಐದು ವಿಕೆಟ್ ಗೊಂಚಲು ನಡುವೆಯೂ ಮಧ್ಯಮ ಕ್ರಮಾಂಕದ ಪವನ್ ದೇಶ್‍ಪಾಂಡೆ (63 ರನ್, 32 ಎಸೆತಗಳು) ಅವರ ಮೌಲ್ಯಯುತ ಅರ್ಧ ಶತಕದ ಬಲದಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಕೊನೆಯ ಲೀಗ್ ಪಂದ್ಯದಲ್ಲಿ ಗೋವಾ ತಂಡಕ್ಕೆ ಸ್ಪರ್ಧಾತ್ಮ ಗುರಿ ನೀಡಿದೆ.

ಇಲ್ಲಿನ ಡಾ. ಪಿ.ವಿ.ಜಿ ರಾಜು ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ನಿಗದಿತ 20 ಓವರ್ ಗಳಿಗೆ 9 ವಿಕೆಟ್ ಕಳೆದುಕೊಂಡು 172 ರನ್ ದಾಖಲಿಸಿತು. ಆ ಮೂಲಕ ಎದುರಾಳಿ ಗೋವಾ ತಂಡಕ್ಕೆ 173 ರನ್ ಗುರಿ ನೀಡಿತು.

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಆರಂಭಿಕ ಆಘಾತ ಅನುಭವಿಸಿತು. ಅದ್ಭುತ ಲಯದಲ್ಲಿದ್ದ ದೇವದತ್ತ ಪಡಿಕ್ಕಲ್(11) ಹಾಗೂ ನಾಯಕ ಮನೀಷ್ ಪಾಂಡೆ (17) ಇವರಿಬ್ಬರು ಹೆರಂಬ್ ಪರಾಬ್‍ಗೆ ವಿಕೆಟ್ ಬಹುಬೇಗ ವಿಕೆಟ್ ಒಪ್ಪಿಸಿದರು. ಒಂದು ಹಂದತಲ್ಲಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಕರುಣ್ ನಾಯರ್ 21 ರನ್ ಗಳಿಸಿ ಔಟ್ ಆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com