ತನ್ನದೇ ರನೌಟ್ ನೋಡಿ ನಾಚಿಕೆಯಿಂದ ತಲೆ ತಲೆ ಚಚ್ಚಿಕೊಂಡ ಗುರಿಂದರ್ ಸಂದು, ವಿಡಿಯೋ ವೈರಲ್!
ಕ್ರಿಕೆಟ್ ಇತಿಹಾಸದಲ್ಲಿ ಹಲವು ಹಾಸ್ಯಾತ್ಮಕ, ರೋಚಕ ರನೌಟ್ ಗಳ ಸರಮಾಲೆನೇ ಇದೆ. ಆದರೆ ಗುರಿಂದರ್ ಸಂದು ತನ್ನದೇ ಎಡವಟ್ಟಿನಿಂದ ಸಿಲ್ಲಿಯಾಗಿ ರನೌಟ್ ಆಗಿ ನಾಚಿಕೆಯಿಂದ ತಲೆ ತಲೆ ಚಚ್ಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಆಸ್ಟ್ರೇಲಿಯಾ ದೇಶೀಯ ಟೂರ್ನಮೆಂಟ್ ಮಾರ್ಶ್ ಕಪ್ ನಲ್ಲಿ ಈ ಘಟನೆ ನಡೆದಿದೆ. ತಸ್ಮಾನಿಯದ ಆಲ್ ರೌಂಡರ್ ಗುರಿಂದರ್ ಸಂದು ತಮ್ಮದೇ ಎಡವಟ್ಟಿನಿಂದ ರನೌಟ್ ಆದ ಬ್ಯಾಟ್ಸ್‌ಮನ್. 49 ಗಳಿಸಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಸಂದು ಮಿಡ್ ವಿಕೆಟ್ ನಲ್ಲಿ ಚೆಂಡನ್ನು ಬಾರಿಸಿದರು. ಎರಡು ರನ್ ಓಡಿದ ನಂತರ ಮೂರನೇ ರನ್ ಗೆ ಓಡುವಾಗ ಸಂದು ಕ್ರಿಸ್ ಒಳಗಿದ್ದರು. ಆದರೆ ಬ್ಯಾಟ್ ಅನ್ನು ಕ್ರಿಸ್ ನಲ್ಲಿ ಇಟ್ಟಿರಲಿಲ್ಲ. ಅಲ್ಲದೆ ಚೆಂಡು ವಿಕೆಟ್ ಗೆ ಬಡಿದಾಗ ಅವರ ಕಾಲುಗಳು ಗಾಳಿಯಲ್ಲಿ ಇದ್ದಿದ್ದರಿಂದ ಅಂಪೈರ್ ಔಟ್ ಎಂದು ತೀರ್ಪು ನೀಡಿದರು.
ಇದರಿಂದ ಬೇಸರಗೊಂಡು ಪೆವಿಲಿಯನ್ ಸೇರಿದ ಸಂದು ತಮ್ಮ ಎಡವಟ್ಟಿಗೆ ನಾಚಿಕೆಯಾಗಿ ತಮ್ಮ ತಲೆಯನ್ನು ಚಚ್ಚಿಕೊಂಡರು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ತಸ್ಮಾನಿಯಾ 223 ರನ್ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ಕ್ವೀನ್ಸ್ ಲ್ಯಾಂಡ್ 6 ವಿಕೆಟ್ ನಷ್ಟಕ್ಕೆ 226 ರನ್ ಪೇರಿಸಿ ಗೆಲುವಿನ ನಗೆ ಬೀರಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ