ಅನುಷ್ಕಾ ಜೊತೆಗೆ ಸೆಲ್ಫೀ: ಕೊಹ್ಲಿಗೆ ಮುಜುಗರದ ಕಾಮೆಂಟ್ ಗಳು!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ, ಸಿನಿಮಾ, ಪ್ರವಾಸ ಅಂತಾ ಓಡಾಡುತ್ತಾ ಸಖತ್ ಎಂಜಯ್ ಮಾಡುತ್ತಿದ್ದಾರೆ.
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ
Updated on

ಮುಂಬೈ:  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ, ಸಿನಿಮಾ, ಪ್ರವಾಸ ಅಂತಾ ಓಡಾಡುತ್ತಾ ಸಖತ್ ಎಂಜಯ್ ಮಾಡುತ್ತಿದ್ದಾರೆ.

ಇತ್ತೀಚಿಗೆ ಅನುಷ್ಕಾ ಶರ್ಮಾ ಜೊತೆಗೆ ಸಿನಿಮಾವೊಂದಕ್ಕೆ ಹೋಗಿದ್ದು, ಸೆಲ್ಫೀ ತೆಗೆದಿರುವ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

'ಹಾಟಿಯೊಂದಿಗೆ ಸಿನಿಮಾ ವೀಕ್ಷಣೆ ಎಂದು ಬರೆದು ಅನುಷ್ಕಾ ಶರ್ಮಾ ಎದೆ ಸೀಳಿರುವ ಪೋಟೋವನ್ನು ವಿರಾಟ್  ಹಂಚಿಕೊಂಡಿದ್ದಾರೆ. ಆದರೆ, ಇದಕ್ಕೆ ಕೆಲವರು ಕೆಟ್ಟ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಅನುಷ್ಕಾ ಬಾಬಿ ದಯವಿಟ್ಟು ದೇಹ ತುಂಬಾ ಬಟ್ಟೆ ಹಾಕಿ. ವಿರಾಟ್ ಕೊಹ್ಲಿ ಪ್ರಾಪರ್ಟಿಯನ್ನು ಬೇರೆಯವರಿಗೆ ತೋರಿಸಬೇಡಿ ಅಂತೆಲ್ಲಾ ತೀರಾ ಕೆಳಮಟ್ಟದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇದೇ ರೀತಿಯ ಮುಜುಗರಕ್ಕೀಡಾಗುವಂತಹ ಅಶ್ಲೀಲ ಕಾಮೆಂಟ್ ಗಳೆ ಹೆಚ್ಚಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com