ವಿಜಯ ಹಜಾರೆ: ಮನೀಷ್ 142, ಕೆಎಲ್ ರಾಹುಲ್ 81, ಕರ್ನಾಟಕಕ್ಕೆ 79 ರನ್ ಜಯ

ನಾಯಕ ಮನೀಶ್ ಪಾಂಡೆ(ಅಜೇಯ 142) ಹಾಗೂ ಕೆಎಲ್ ರಾಹುಲ್(81) ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಕರ್ನಾಟಕ ವಿಜಯ ಕ್ರಿಕೆಟ್ ಟೂರ್ನಿಯಲ್ಲಿ 79 ರನ್ ಗಳಿಂದ ಚತ್ತೀಸ್‌ಗಢ ತಂಡವನ್ನು ಮಣಿಸಿದೆ.
ಮನೀಶ್ ಪಾಂಡೆ
ಮನೀಶ್ ಪಾಂಡೆ
Updated on

ಬೆಂಗಳೂರು: ನಾಯಕ ಮನೀಶ್ ಪಾಂಡೆ(ಅಜೇಯ 142) ಹಾಗೂ ಕೆಎಲ್ ರಾಹುಲ್(81) ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಕರ್ನಾಟಕ ವಿಜಯ ಕ್ರಿಕೆಟ್ ಟೂರ್ನಿಯಲ್ಲಿ 79 ರನ್ ಗಳಿಂದ ಚತ್ತೀಸ್‌ಗಢ ತಂಡವನ್ನು ಮಣಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 285 ರನ್ ಪೇರಿಸಿತ್ತು. 286 ರನ್ ಗಳ ಗುರಿ ಬೆನ್ನಟ್ಟಿದ ಚತ್ತೀಸ್‌ಗಢ ತಂಡ 206 ರನ್ ಗಳಿಗೆ ಆಲೌಟ್ ಆಯಿತು. 

ಕರ್ನಾಟಕದ ವೇಗಿ ಎಂ ಪ್ರಸಿಧ್ ಕೃಷ್ಣಾ 31 ರನ್ ಗಳಿಗೆ 3 ವಿಕೆಟ್ ಪಡೆದರೆ, ರೋನಿತ್ ಮೊರೆ 52 ರನ್ ಗೆ 2 ವಿಕೆಟ್ ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com