ಶೇನ್ ವಾಟ್ಸನ್
ಕ್ರಿಕೆಟ್
ಮಹಿಳೆಯರ ಅಶ್ಲೀಲ ಫೋಟೋ ಪೋಸ್ಟ್: ಆಸೀಸ್ ಮಾಜಿ ಕ್ರಿಕೆಟಿಗನ ಕ್ಷಮೆಯಾಚನೆ!
ತಮ್ಮ ಇನ್ ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಮಹಿಳೆಯರ ಅಶ್ಲೀಲ ಫೋಟೋಗಳು ಅಪ್ಲೋಡ್ ಆಗಿರುವುದಕ್ಕೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್ ಕ್ಷಮೆಯಾಚಿಸಿದ್ದಾರೆ.
ಸಿಡ್ನಿ: ತಮ್ಮ ಇನ್ ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಮಹಿಳೆಯರ ಅಶ್ಲೀಲ ಫೋಟೋಗಳು ಅಪ್ಲೋಡ್ ಆಗಿರುವುದಕ್ಕೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್ ಕ್ಷಮೆಯಾಚಿಸಿದ್ದಾರೆ.
ಮೊದಲು ವಾಟ್ಸನ್ ಅವರ ಟ್ವೀಟರ್ ಖಾತೆಯನ್ನು ಹ್ಯಾಕ್ ಮಾಡಿದ್ದ ಕಿಡಿಗೇಡಿಗಳು ನಿನ್ನೆ ಇನ್ ಸ್ಟಾಗ್ರಾಂ ಅನ್ನು ಹ್ಯಾಕ್ ಮಾಡಿ ಅದರಲ್ಲಿ ಒಳ ಉಡುಪಿನಲ್ಲಿರುವ ಮೂರು ಮಹಿಳೆಯರ ಫೋಟೋವನ್ನು ಪೋಸ್ಟ್ ಮಾಡಿದ್ದರು.
ಇದೇ ಅಲ್ಲದೆ ವಾಟ್ಸನ್ ಖಾತೆಯಿಂದ ನಿಂದನೆ ಮತ್ತು ಕೋಮುವಾದ ಸೃಷ್ಟಿ ಮಾಡುವ ಟ್ವೀಟ್ ಮಾಡಿ ಕೆಲವರಿಗೆ ಅವಹೇಳನಕಾರಿಯಾಗಿ ಕಮೆಂಟ್ ಕೂಡ ಮಾಡಿದ್ದರು. ಇದಕ್ಕೆ ವಾಟ್ಸನ್ ಕ್ಷಮೆಯಾಚಿಸಿದ್ದು ನನ್ನು ಖಾತೆ ಹ್ಯಾಕ್ ಮಾಡಿ ಇತರಹದ ಚಿತ್ರಗಳನ್ನು ಹಾಕಿದ್ದಾರೆ ಅದಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದರು.
ಇದೇ ಅಲ್ಲದೆ ಅಶ್ಲೀಲ ಫೋಟೋಗಳು ಮತ್ತು ಅಸಭ್ಯ ವಿಡಿಯೋಗಳನ್ನು ಹಾಕಿರುವುದು ನಾಚಿಕೆಗೇಡಿನ ಸಂಗತಿ ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ