ಸತತ ವೈಫಲ್ಯ: ಪಾಕ್ ತಂಡದ ನಾಯಕ ಸ್ಥಾನದಿಂದ ಸರ್ಫರಾಜ್ ಅಹ್ಮದ್ ವಜಾ!

ವಿಶ್ವಕಪ್ ಟೂರ್ನಿಯಲ್ಲಿನ ಭಾರತದ ವಿರುದ್ಧದ ಸೋಲಿನ ಬಳಿಕ ಸತತ ವೈಫಲ್ಯ ಅನುಭವಿಸುತ್ತಿರುವ ಪಾಕಿಸ್ತಾನ ತಂಡಕ್ಕೆ ಮೇಜರ್ ಸರ್ಜರಿ ಮಾಡಲಾಗಿದ್ದು, ನಾಯಕ ಸ್ಥಾನದಿಂದ ಸರ್ಫರಾಜ್ ಅಹ್ಮದ್ ರನ್ನು ಕೆಳಗಿಳಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಇಸ್ಲಾಮಾಬಾದ್: ವಿಶ್ವಕಪ್ ಟೂರ್ನಿಯಲ್ಲಿನ ಭಾರತದ ವಿರುದ್ಧದ ಸೋಲಿನ ಬಳಿಕ ಸತತ ವೈಫಲ್ಯ ಅನುಭವಿಸುತ್ತಿರುವ ಪಾಕಿಸ್ತಾನ ತಂಡಕ್ಕೆ ಮೇಜರ್ ಸರ್ಜರಿ ಮಾಡಲಾಗಿದ್ದು, ನಾಯಕ ಸ್ಥಾನದಿಂದ ಸರ್ಫರಾಜ್ ಅಹ್ಮದ್ ರನ್ನು ಕೆಳಗಿಳಿಸಲಾಗಿದೆ.

ಈ ಕುರಿತಂತೆ ಇಂದು ಸಭೆ ನಡೆಸಿದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಸರ್ಫಾರಾಜ್ ಅಹ್ಮದ್ ರನ್ನು ಟಿ20, ಟೆಸ್ಟ್ ಕ್ರಿಕೆಟ್ ನ ನಾಯಕ ಸ್ಥಾನದಿಂದ ಕೆಳಗಿಳಿಸಿದೆ. ಅಷ್ಟು ಮಾತ್ರವಲ್ಲದೇ ಮುಂಬರುವ ಪಾಕಿಸ್ತಾನ ತಂಡದ ಆಸ್ಟ್ರೇಲಿಯಾ ಪ್ರವಾಸದಿಂದಲೂ ಅವರನ್ನು ಕೈ ಬಿಡಲಾಗಿದ್ದು, ವಿಶ್ರಾಂತಿ ನೀಡಲಾಗಿದೆ.

ಇನ್ನು ಆಸಿಸ್ ಪ್ರವಾಸಕ್ಕಾಗಿ ತಂಡದ ಮತ್ತೋರ್ವ ಹಿರಿಯ ಅಟಗಾರ ಅಜರ್ ಅಲಿಗೆ ಟೆಸ್ಟ್ ನಾಯಕತ್ವ ವಹಿಸಲಾಗಿದ್ದು, ಈ ಟೂರ್ನಿಯಿಂದಲೇ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಟೂರ್ನಿಯಲ್ಲಿ ಪಾಕಿಸ್ತಾನ ಅಧಿಕೃತ ಪದಾರ್ಪಣೆಯಾಗಲಿದೆ. ಇನ್ನು ಉದಯೋನ್ಮುಖ ಆಟಗಾರ ಬಾಬರ್ ಅಜಮ್ ಗೆ ಟಿ20 ತಂಡದ ನಾಯಕತ್ವ ವಹಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com