ವಿಜಯ್ ಹಜಾರೆ ಫೈನಲ್ : ಅಭಿಮನ್ಯು ಮಿಥುನ್  ಹ್ಯಾಟ್ರಿಕ್ ವಿಕೆಟ್ ಸಾಧನೆ!

ವಿಜಯ್ ಹರಾರೆ ಟ್ರೋಫಿಯಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಬಲಗೈ ವೇಗಿ ಅಭಿಮನ್ಯು ಮಿಥುನ್ ಪಾತ್ರರಾಗಿದ್ದಾರೆ.
ಅಭಿಮನ್ಯು ಮಿಥುನ್ ಅಭಿನಂದಿಸುತ್ತಿರುವ ಕರುಣ್  ನಾಯ್ಯರ್
ಅಭಿಮನ್ಯು ಮಿಥುನ್ ಅಭಿನಂದಿಸುತ್ತಿರುವ ಕರುಣ್ ನಾಯ್ಯರ್

ಬೆಂಗಳೂರು: ವಿಜಯ್ ಹರಾರೆ ಟ್ರೋಫಿಯಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಬಲಗೈ ವೇಗಿ ಅಭಿಮನ್ಯು ಮಿಥುನ್ ಪಾತ್ರರಾಗಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ತಮಿಳುನಾಡು ಹಾಗೂ ಕರ್ನಾಟಕ ನಡುವಣ ಫೈನಲ್ ಪಂದ್ಯದಲ್ಲಿ ತಮ್ಮ 30ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮಿಥುನ್ ಈ ಸಾಧನೆ ಮಾಡಿದ್ದಾರೆ.

ತಮಿಳುನಾಡು ಇನ್ನಿಂಗ್ಸ್  ನಲ್ಲಿ ಶಾರೂಖ್ ಖಾನ್ (27)  ಎಂ, ಮೊಹಮ್ಮದ್ ( 10) ಹಾಗೂ ಮುರುಗನ್ ಅಶ್ವಿನ್  ಅವರನ್ನು ಶೂನ್ಯ ರನ್ ಗಳಿಗೆ ಮಿಥುನ್ ಔಟ್ ಮಾಡಿದ್ದಾರೆ.

50ನೇ ಓವರ್ ನಲ್ಲಿ ಶಾರೂಖ್ ಖಾನ್,  ಮನೀಷ್ ಪಾಂಡೆಗೆ ಕ್ಯಾಚ್ ನೀಡಿ ನಿರ್ಗಮಿಸಿದರೆ, ನಂತರ ಬಂದ ಮೊಹಮ್ಮದ್ ಅವರನ್ನು ದೇವದತ್ತ ಪಡಿಕ್ಕ ಕ್ಯಾಚ್ ಪಡೆದರು. ಅವರ ನಂತರ ಬಂದ ಮುರುಗನ್ ಅವರನ್ನು ಕೃಷ್ಣಪ್ಪ ಗೌತಮ್ ಕ್ಯಾಚ್ ಹಿಡಿದರು. ಇದರೊಂದಿಗೆ ತಮಿಳುನಾಡು 252 ರನ್ ಗಳನ್ನು ಗಳಿಸಿತು. 

ಅಭಿಮನ್ಯು ಮಿಥುನ್ ಗಿಂತ ಮುಂಚೆ ಬೌಲಿಂಗ್ ಮಾಡಿದ ಮುರಳಿ ವಿಜಯ್ ಮೊದಲ  ಓವರ್ ನಲ್ಲಿಯೇ ಒಬ್ಬರನ್ನು ಡಕ್ ಔಟ್ ಮಾಡುವ ಮೂಲಕ ಕರ್ನಾಟಕಕ್ಕೆ ಉತ್ತಮ ಆರಂಭ ನೀಡಿದರು. 46ನೇ ಓವರ್ ನಲ್ಲಿ ಮತ್ತೊಂದು ವಿಕೆಟ್ ಪಡೆದುಕೊಂಡರು. ಕರುಣ್ ನಾಯರ್  ವಿಜಯ್ ಶಂಕರ್ ಅವರ ಕ್ಯಾಚ್ ಪಡೆದರು. 

ಅಭಿಮನ್ಯು ಮಿಥುನ್ 34 ರನ್ ಗಳಿಗೆ 5 ವಿಕೆಟ್ ಪಡೆಯುವ ಮೂಲಕ  ಎ ದರ್ಜೆಯ ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ ಐದು ವಿಕೆಟ್ ಪಡೆದ ಆಟಗಾರರ ಪಟ್ಟಿ ಸೇರಿದರು. ವಿಜಯ್ ಹರಾರೆ ಟ್ರೋಫಿ ಫೈನಲ್ ನಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್ ವಿಕೆಟ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com